









Hagaribommanahalli, Aug. 15: The 80th Independence Day was celebrated at Rashtrotthana Vidya Kendra – Hagaribommanahalli.
- The program was inaugurated by singing the Vande Mataram song in a group.
- Sri Basavanagowda, Secretary of the Hagaribommanahalli Rashtrotthana Sanstha and Sri Papanna, Headmaster of Rashtrotthana High School, who arrived as guests of the program, hoisted the flag.
- Honourable Sri Basavanagowda said, “Indians fought continuously to reduce the rule of the British. Our India is the largest democratic country in the world. Ours is a country with diversity in unity. If India is to become a developed India by 2047, we must preserve and develop our culture and cultural heritage. We must act as if the body is not different and the country is not different. Patriotism should be in our behaviour and expression.”
- Children from Saraswati Shishu Mandir added a touch of sparkle to the program by sharing Independence Day messages.
ಹಗರಿಬೊಮ್ಮನಹಳ್ಳಿ, ಆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ಹಗರಿಬೊಮ್ಮನಹಳ್ಳಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
- ವಂದೇ ಮಾತರಂ ಗೀತೆಯನ್ನು ಸಾಮೂಹಿಕವಾಗಿ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
- ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಸವನಗೌಡರು ಹಾಗೂ ರಾಷ್ಟ್ರೋತ್ಥಾನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಪಾಪಣ್ಣರವರು ಧ್ವಜಾರೋಹಣ ನೆರವೇರಿಸಿದರು.
- ಗೌರವಾನ್ವಿತ ಶ್ರೀ ಬಸವನಗೌಡರು ಮಾತನಾಡಿ “ಬ್ರಿಟಿಷರ ಅಧಿಪತ್ಯವನ್ನು ತಗ್ಗಿಸಲು ಭಾರತೀಯರು ನಿರಂತರವಾಗಿ ಹೋರಾಡಿದರು. ನಮ್ಮ ಭಾರತ ಜಗತ್ತಿನಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ದೇಶ. ಏಕತೆಯಲ್ಲಿ ವೈವಿಧ್ಯತೆ ಹೊಂದಿದ ದೇಶ ನಮ್ಮದು. 2047ರ ಹೊತ್ತಿಗೆ ಭಾರತ ವಿಕಸಿತ ಭಾರತ ಆಗಬೇಕಾದರೆ ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸಬೇಕು. ದೇಹ ಬೇರೆಯಲ್ಲ ದೇಶ ಬೇರೆಯಲ್ಲ ಎಂಬುದಾಗಿ ಕಾರ್ಯಪ್ರವೃತ್ತರಾಗಬೇಕು. ದೇಶಭಕ್ತಿ ಎಂಬುದು ನಮ್ಮ ನಡವಳಿಕೆ ಅಭಿವ್ಯಕ್ತಿಯಲ್ಲಿ ಇರಬೇಕು” ಎಂದು ಹೇಳಿದರು.
- ಸರಸ್ವತಿ ಶಿಶು ಮಂದಿರದ ಮಕ್ಕಳು ಸ್ವಾತಂತ್ರ್ಯ ದಿನಾಚರಣೆಯ ಸಂದೇಶಗಳನ್ನು ತಿಳಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ತಂದುಕೊಟ್ಟರು.
One Response