Hagaribommanahalli, June 24: The inaugural program of Mathrubharathi for the academic year 2026-27 was organised at Rashtrotthana Vidya Kendra – Hagaribommanahalli.
Sri Basavanagowda, explaining the purpose of Mathrubharathi, said that the role of mothers is very important in the all-round development of children. Mothers should actively participate in various school activities. In addition to showcasing their skills, children should also be involved in at least one skill such as storytelling, paper craft, rangoli, painting, etc., he said. Sri Durganna explained in detail the responsibilities and roles of the members of the Mathrubharathi Committee. Sri Ranganath announced the names of the President and Secretary of the Mathrubharathi Committee and gave information about the importance of girl child education. 31 mothers were present in this program.

ಹಗರಿಬೊಮ್ಮನಹಳ್ಳಿ, ಜೂ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಮಾತೃಭಾರತಿ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶ್ರೀ ಬಸವನಗೌಡ ಅವರು ಮಾತೃಭಾರತಿಯ ಉದ್ದೇಶವನ್ನು ವಿವರಿಸುತ್ತಾ, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು. ಶಾಲೆಯ ವಿವಿಧ ಚಟುವಟಿಕೆಗಳಲ್ಲಿ ತಾಯಂದಿರು ಸಕ್ರಿಯವಾಗಿ ಭಾಗವಹಿಸಬೇಕು. ತಮ್ಮಲ್ಲಿರುವ ಕೌಶಲ್ಯಗಳನ್ನು ಪ್ರದರ್ಶಿಸುವುದರ ಜೊತೆಗೆ ಮಕ್ಕಳನ್ನೂ ಕಥೆ ಹೇಳುವುದು, ಪೇಪರ್ ಕ್ರಾಫ್ಟ್, ರಂಗೋಲಿ, ಚಿತ್ರಕಲೆ ಮುಂತಾದ ಕನಿಷ್ಠ ಒಂದು ಕೌಶಲ್ಯದಲ್ಲಿ ತೊಡಗಿಸಬೇಕು ಎಂದು ತಿಳಿಸಿದರು. ಶ್ರೀ ದುರ್ಗಣ್ಣ ಅವರು ಮಾತೃಭಾರತಿ ಸಮಿತಿಯ ಸದಸ್ಯರ ಜವಾಬ್ದಾರಿಗಳು ಹಾಗೂ ಅವರ ಪಾತ್ರವನ್ನು ಸವಿವರವಾಗಿ ವಿವರಿಸಿದರು. ಶ್ರೀ ರಂಗನಾಥ್ ಅವರು ಮಾತೃಭಾರತಿ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರ ಹೆಸರನ್ನು ಪ್ರಕಟಿಸಿ, ಬಾಲಿಕಾ ಶಿಕ್ಷಣದ ಮಹತ್ವದ ಕುರಿತು ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ 31 ಮಾತೆಯರು ಉಪಸ್ಥಿತರಿದ್ದರು.