










Hagaribommanahalli, June 21: International Yoga Day was organized herein Rashtrotthana Vidya Kendra – Hagaribommanahalli. Dr. Siddesh Shivaswamy, a popular doctor of the town, was the chief guest for the program and Sri B Basavan Gowda had arrived. Dr. who participated as the chief speaker of the program. Dr. Siddesh spoke and said, “To have a strong body and mind, we should adopt yogasana in our lifestyle. Health is a great blessing. By practicing yoga, you can improve your memory and get cultured education.” Then Sri Basavan Gowda spoke and suggested that “if the body and mind are restrained, one can concentrate in the practice, so adopt a healthy life through specific asanas, pranayama, meditation and stress-free techniques.” Yoga performances were given by yoga experts. Then he performed collective Suryanamaskarasana for all Prakalpada students.
ಹಗರಿಬೊಮ್ಮನಹಳ್ಳಿ, ಜೂ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಟ್ಟಣದ ಜನಪ್ರಿಯ ವೈದ್ಯರಾದ ಡಾ.ಸಿದ್ದೇಶ ಶಿವಸ್ವಾಮಿಯವರು ಹಾಗೂ ಅಧ್ಯಕ್ಷರಾಗಿ ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಸಂಸ್ಥೆಯ ಮುಖ್ಯ ಕಾರ್ಯದರ್ಶಿಗಳಾದ ಶ್ರೀ. ಬಿ ಬಸವನಗೌಡರು ಆಗಮಿಸಿದ್ದರು. ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಭಾಗವಹಿಸಿದ್ದ ಡಾ. ಸಿದ್ದೇಶ್ ಅವರು ಮಾತನಾಡಿ “ಸದೃಢವಾದ ದೇಹ ಮನಸ್ಸು ನಮ್ಮದಾಗಿರಲು ನಮ್ಮ ಜೀವನ ಶೈಲಿಯಲ್ಲಿ ಯೋಗಾಸನವನ್ನು ಅಳವಡಿಸಿಕೊಳ್ಳಬೇಕು. ಆರೋಗ್ಯವೇ ಮಹಾಭಾಗ್ಯ. ಯೋಗ ಅಭ್ಯಾಸದಿಂದ ಸ್ಮರಣ ಶಕ್ತಿ ಹೆಚ್ಚಿಸಿಕೊಂಡು ಸಂಸ್ಕಾರಯುತ ಶಿಕ್ಷಣ ಪಡೆಯಬಹುದು” ಎಂದರು. ನಂತರ ಶ್ರೀ ಬಸವನಗೌಡರು ಮಾತನಾಡಿ “ಶರೀರ ಮತ್ತು ಮನಸ್ಸನ್ನು ನಿಗ್ರಹಿಸಿದರೆ ಅಭ್ಯಾಸದಲ್ಲಿ ಏಕಾಗ್ರತೆ ಹೊಂದಲು ಸಾಧ್ಯ ಆದ್ದರಿಂದ ನಿರ್ದಿಷ್ಟ ಆಸನಗಳು, ಪ್ರಾಣಾಯಾಮ, ಧ್ಯಾನ ಮತ್ತು ಒತ್ತಡ ರಹಿತ, ತಂತ್ರಗಳ ಮೂಲಕ ಆರೋಗ್ಯಯುತ ಜೀವನ ರೂಢಿಸಿಕೊಳ್ಳಿ” ಎಂದು ಸಲಹೆ ನೀಡಿದರು. ಯೋಗದ ವಿಶೇಷ ಪಟುಗಳಿಂದ ಯೋಗ ಪ್ರದರ್ಶನ ನೀಡಲಾಯಿತು. ನಂತರ ಎಲ್ಲಾ ಪ್ರಕಲ್ಪದ ವಿದ್ಯಾರ್ಥಿಗಳಿಗೆ ಸಾಮೂಹಿಕ ಸೂರ್ಯನಮಸ್ಕಾರಾಸನಗಳನ್ನು ಮಾಡಿಸಿದರು.