





Hagaribommanahalli, June 27: Hindu Samrajya Diwas and Leadership Pledge Ceremony were celebrated herein Rashtrotthana Vidya Kendra – Hagaribommanahalli.
Sri Sakralli Kotresh arrived as the spokesperson of the program.
• Sri Basavanagoudru, Secretary, Rashtrotthana Vidya Kendra – Hagaribommanahalli, who presided over the program, said that Rashtrotthana Sanstha has given more importance to 3H (Head, Heart, Hand) than 3R. Leadership should be innate. Shivaji Maharaj is a good example of this. Shivaji, who built an empire by including all the Mavali races, had an ideal mother and an excellent teacher. Our India can be saved with our culture and self-reliance. Leadership should be manifested throughout life.
• Sri Kotresh said that we should adopt the leadership qualities of Shivaji. Leadership blossoms in the midst of problems; a leader must always be alert. He said that the environment has a great influence on children.
• The oath-taking ceremony was presided over by the Principal, Sri Ranganath.
• Each channel was given a flag to symbolize its authority.
ಹಗರಿಬೊಮ್ಮನಹಳ್ಳಿ, ಜೂ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಳ್ಳಿಯಲ್ಲಿ ಹಿಂದೂ ಸಾಮ್ರಾಜ್ಯ ದಿವಸ್ ಮತ್ತು ನಾಯಕತ್ವ ಪ್ರತಿಜ್ಞಾ ಸ್ವೀಕಾರ ಸಮಾರಂಭವನ್ನು ಆಚರಿಸಲಾಯಿತು. ಕಾರ್ಯಕ್ರಮದ ವಕ್ತಾರರಾಗಿ ಶ್ರೀ ಸಕ್ರಳ್ಳಿ ಕೊಟ್ರೇಶ್ ಅವರು ಆಗಮಿಸಿದ್ದರು:
• ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಬಸವನಗೌಡ್ರು, ಕಾರ್ಯದರ್ಶಿಗಳು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಹಗರಿಬೊಮ್ಮನಹಳ್ಳಿ ಇವರು ರಾಷ್ಟ್ರೋತ್ಥಾನ ಸಂಸ್ಥೆಯು 3R ಗಿಂತ ಹೆಚ್ಚಾಗಿ 3Hಗೆ (Head, Heart, Hand) ಹೆಚ್ಚಿಗೆ ಪ್ರಾಮುಖ್ಯತೆಯನ್ನು ಕೊಟ್ಟಿದೆ. ನಾಯಕತ್ವ ಜನ್ಮಜಾತವಾಗಬೇಕು. ಶಿವಾಜಿ ಮಹಾರಾಜರು ಇದಕ್ಕೆ ಉತ್ತಮ ಉದಾಹರಣೆ. ಮಾವಳಿ ಜನಾಂಗವನ್ನೆಲ್ಲ ಸೇರಿಸಿ ಸಾಮ್ರಾಜ್ಯವನ್ನು ಕಟ್ಟಿದ ಶಿವಾಜಿಗೆ ಆದರ್ಶ ತಾಯಿ ಮತ್ತು ಅತ್ಯುತ್ತಮ ಗುರು ಸಿಕ್ಕಿದ್ದರು. ನಮ್ಮ ಸಂಸ್ಕೃತಿ ಮತ್ತು ಆತ್ಮ ನಿರ್ಭರದಿಂದ ನಮ್ಮ ಭಾರತವನ್ನು ಉಳಿಸಲು ಸಾಧ್ಯ. ನಾಯಕತ್ವ ಜೀವನದ ಉದ್ದಕ್ಕೂ ಪ್ರಕಟವಾಗ ಬೇಕು ಎಂದು ಹೇಳಿದರು.
• ಶ್ರೀ ಕೊಟ್ರೇಶ್ ರವರು ಶಿವಾಜಿಯ ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳಿ ಎಂದು ಹೇಳಿದರು. • ಸಮಸ್ಯೆಗಳ ಮಧ್ಯದಲ್ಲಿ ನಾಯಕತ್ವ ಅರಳುವುದು, ನಾಯಕನಾದವನು ಸದಾ ಎಚ್ಚರದಿಂದಿರಬೇಕು. ಮಕ್ಕಳ ಮೇಲೆ ಪರಿಸರ ತುಂಬಾ ಪ್ರಭಾವವನ್ನು ಬೀರುತ್ತದೆ ಎಂದು ಹೇಳಿದರು.
• ಪ್ರತಿಜ್ಞಾವಿಧಿ ಬೋಧನೆಯನ್ನು ಪ್ರಧಾನಾಚಾರ್ಯರಾದ ಶ್ರೀ ರಂಗನಾಥ್ ಬೋಧಿಸಿದರು.
• ಪ್ರತಿ ವಾಹಿನಿಗೂ ಧ್ವಜವನ್ನು ನೀಡುವುದರ ಮೂಲಕ ಅಧಿಕಾರವನ್ನು ಕೊಡಲಾಯಿತು.