Hagaribommanahalli, Dec. 26: Veer Bal Diwas was celebrated herein Rashtrotthana Vidya Kendra – Hagaribommanahalli.Speaking at the event, Principal Sri Sri Ranganath said, “This day is dedicated to remembering the unparalleled sacrifice of Sahibzade Zorawar Singh and Fateh Singh, the brave sons of Guru Gobind Singh. They sacrificed their lives for religion, truth and justice at a young age, which is unparalleled in history.Veer Bal Diwas is an important day to instil courage, patriotism, morality and a sense of sacrifice in children. The celebrations of this day inspire our young generation to stand on the path of truth and religion.”The students of class III narrated the incidents of bravery of Zorawar Singh and Fateh Singh.

ಹಗರಿಬೊಮ್ಮನಹಳ್ಳಿ, ಡಿ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ವೀರ ಬಾಲ ದಿವಸವನ್ನು ಆಚರಿಸಲಾಯಿತು.ಪ್ರಧಾನಾಚಾರ್ಯರಾದ ಶ್ರೀ ಶ್ರೀರಂಗನಾಥ ಅವರು ಮಾತನಾಡಿ “ಈ ದಿನವು ಗುರು ಗೋಬಿಂದ ಸಿಂಗ್ ಅವರ ಧೈರ್ಯಶಾಲಿ ಪುತ್ರರಾದ ಸಾಹಿಬ್‌ಜಾದೆ ಜೋರಾವರ್ ಸಿಂಗ್ ಹಾಗೂ ಫತೇಹ್ ಸಿಂಗ್ ಅವರ ಅಪ್ರತಿಮ ತ್ಯಾಗವನ್ನು ಸ್ಮರಿಸುವುದಕ್ಕಾಗಿ ಮೀಸಲಾಗಿದೆ. ಅಲ್ಪ ವಯಸ್ಸಿನಲ್ಲಿಯೇ ಧರ್ಮ, ಸತ್ಯ ಮತ್ತು ನ್ಯಾಯಕ್ಕಾಗಿ ಅವರು ತಮ್ಮ ಪ್ರಾಣತ್ಯಾಗ ಮಾಡಿದ್ದು, ಇತಿಹಾಸದಲ್ಲಿ ಅಜರಾಮರವಾಗಿದೆ.
ವೀರ ಬಾಲ ದಿವಸವು ಮಕ್ಕಳಲ್ಲಿ ಧೈರ್ಯ, ದೇಶಭಕ್ತಿ, ನೈತಿಕತೆ ಮತ್ತು ತ್ಯಾಗಭಾವನೆ ಬೆಳೆಸುವ ಮಹತ್ವದ ದಿನವಾಗಿದೆ. ಈ ದಿನದ ಆಚರಣೆಗಳು ನಮ್ಮ ಯುವ ಪೀಳಿಗೆಗೆ ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಿಲ್ಲುವ ಪ್ರೇರಣೆಯನ್ನು ನೀಡುತ್ತವೆ” ಎಂದು ಹೇಳಿದರು.
ವಿದ್ಯಾರ್ಥಿಗಳು ಜೋರಾವರ್ ಸಿಂಗ್ ಹಾಗೂ ಫತೇಹ ಸಿಂಗ್‍ರವರ ಶೌರ್ಯದ ಘಟನಾವಳಿಗಳನ್ನು ಹೇಳಿದರು.