Hagaribommanahalli, Oct 14-15: The two-day Teacher Rejuvenation Workshop herein Rashtrotthana Vidya Kendra – Hagaribommanahalli, was inaugurated with the lighting of a lamp. Dr. B. Vishwanath, ಧoctor from Hagaribommnahalli; School Correspondent, Dr. Vinayasimha graced the program. Principal of Hagaribommanahalli, on professionalism, Sri Suvira, Vice Principal of Hagaribommanahalli on technology integration, Smt. Sridevi, coordinator of the school’s senior department on collaborative approach, Sri Sriranganath on competency-based approach took the session. Smt. Padma Vitthal, Sanskara Bharati Akhil Bharat Prabhadkarani Member, interacted with the teachers on the concept of national awakening and guided them towards ‘moving from commitment to maturity’. Sri Gopi, of Bellary, Provincial Executive Member of RSS Karnataka Northern Province elaborated the personality of ‘Sardara Vallabhbhai Patel’ and agriculturist of Birsa cste birs Munda. Later Sri Sriranganath, Principal, Rashtrotthana Vidya Kendra – Hagaribommanahalli, took a session on ‘Competency Based Assessment’. Sri Basavanagowda, Secretary of Hagaribommanahalli Rashtrotthana Sansthe, was present as the guest in the concluding program. Smt. Saraswathi, Principal of Rashtrotthana Vidya Kendra – Ballari read out the report of the two-day training session saying “Teachers should make good use of the knowledge acquired in the two-day teacher training workshop”. They came to know that, how does the pre-primary Gokulam Department understand the innovative approach, development methods, see progress in the students through holistic approach? About seventy teachers including pre-primary section from Kalaburagi, Davanagere, Sattur, Ballari, Kerur participated.
ಹಗರಿಬೊಮ್ಮನಹಳ್ಳಿ, ಅಕ್ಟೋಬರ್ 14-15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆದ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರವನ್ನು ದೀಪ ಪ್ರಜ್ವಲನದೊಂದಿಗೆ ಪ್ರಾರಂಭಿಸಲಾಯಿತು. ಹಗರಿಬೊಮ್ಮನಹಳ್ಳಿಯ ಪ್ರಖ್ಯಾತ ವೈದ್ಯರಾದ ಡಾ. ಬಿ.ವಿಶ್ವನಾಥ್ ರವರು, ಶಾಲೆಯ ಕರೆಸ್ಪಾಂಡೆಂಟ್ ಆದ ಡಾ. ವಿನಯಸಿಂಹರವರು ಆಗಮಿಸಿದ್ದರು. ವೃತ್ತಿಪರತೆ ವಿಷಯದ ಕುರಿತು ಹಗರಿಬೊಮ್ಮನಹಳ್ಳಿಯ ಪ್ರಧಾನಾಚಾರ್ಯರು, ತಂತ್ರಜ್ಞಾನ ಏಕೀಕರಣದ ಕುರಿತು ಹಗರಿಬೊಮ್ಮನಹಳ್ಳಿ ಉಪ ಪ್ರಧಾನಾಚಾರ್ಯರಾದ ಶ್ರೀ ಸುವಿರಾ ಅವರು, ಸಹಯೋಗದ ವಿಧಾನ ವಿಷಯದ ಕುರಿತು ಶಾಲೆಯ ಪ್ರೌಢ ವಿಭಾಗದ ಕೋ-ಆರ್ಡಿನೇಟರ್ ಆದ ಶ್ರೀಮತಿ ಶ್ರೀದೇವಿಯವರು, ಸಾಮರ್ಥ್ಯ ಆಧಾರಿತ ವಿಧಾನ ವಿಷಯದ ಕುರಿತು ಶ್ರೀರಂಗನಾಥರವರು ಅವಧಿಯನ್ನು ತೆಗೆದುಕೊಂಡರು. ಸಂಸ್ಕಾರ ಭಾರತಿ ಅಖಿಲ ಭಾರತ ಪ್ರಬಂಧಕಾರಣಿ ಸದಸ್ಯರಾದ ಶ್ರೀಮತಿ ಪದ್ಮ ವಿಠ್ಠಲರವರು ರಾಷ್ಟ್ರೋತ್ಥಾನ ಪರಿಕಲ್ಪನೆಯ ಕುರಿತು ಶಿಕ್ಷಕರೊಂದಿಗೆ ಸಂವಾದವನ್ನು ನಡೆಸಿ ‘ಬದ್ಧತೆಯಿಂದ ಪ್ರಬುದ್ಧತೆಯ ಕಡೆಗೆ ನಡೆ’ಯುವುದರ ಕಡೆಗೆ ಮಾರ್ಗದರ್ಶನ ನೀಡಿದರು. ಆರ್.ಎಸ್.ಎಸ್. ಕರ್ನಾಟಕ ಉತ್ತರ ಪ್ರಾಂತ್ಯದ ಪ್ರಾಂತ ಕಾರ್ಯಕಾರಣಿ ಸದಸ್ಯರಾದ ಬಳ್ಳಾರಿಯ ಶ್ರೀ ಗೋಪಿಜೀಯವರು ‘ಸರ್ದಾರ ವಲ್ಲಭಭಾಯಿ ಪಟೇಲ್’ ರವರ ವ್ಯಕ್ತಿ ಚಿತ್ರಣವನ್ನು ಸವಿಸ್ತಾರವಾಗಿ ವಿವರಿಸಿದರು. ನಂತರದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಗರಿಬೊಮ್ಮನಹಳ್ಳಿಯ ಪ್ರಾಂಶುಪಾಲರಾದ ಶ್ರೀರಂಗನಾಥರವರು ‘ಸಾಮರ್ಥ್ಯ ಆಧಾರಿತ ಮೌಲ್ಯಮಾಪನ’ ವಿಷಯದ ಕುರಿತು ಅವಧಿಯನ್ನು ತೆಗೆದುಕೊಂಡರು. ಸಮಾರೋಪ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಸವನಗೌಡರು ಉಪಸ್ಥಿತರಿದ್ದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬಳ್ಳಾರಿಯ ಪ್ರಾಚಾರ್ಯರಾದ ಶ್ರೀಮತಿ ಸರಸ್ವತಿಯವರು “ಶಿಕ್ಷಕರು ಎರಡು ದಿನಗಳ ಕಾಲ ನಡೆದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಪಡೆದುಕೊಂಡ ಜ್ಞಾನವನ್ನು ಸದುಪಯೋಗ ಪಡೆದುಕೊಳ್ಳಬೇಕು” ಎನ್ನುತ್ತಾ ಎರಡು ದಿನದ ತರಬೇತಿ ಅವಧಿಯ ವರದಿ ವಾಚನ ಮಾಡಿದರು. ಪೂರ್ವ ಪ್ರಾಥಮಿಕ ಗೋಕುಲಮ್ ವಿಭಾಗದವರು ನವೀನ ವಿಧಾನ, ಅಭಿವೃದ್ಧಿ ವಿಧಾನಗಳನ್ನು ಅರ್ಥಮಾಡಿಕೊಳ್ಳುವುದು, ಸಮಗ್ರ ವಿಧಾನದ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಗತಿಯನ್ನು ಕಾಣುವುದು ಹೇಗೆ? ಎಂಬ ವಿಷಯವನ್ನು ತಿಳಿದುಕೊಂಡರು. ಕಲಬುರ್ಗಿ, ದಾವಣಗೆರೆ, ಸತ್ತೂರು, ಬಳ್ಳಾರಿ, ಕೆರೂರಿನ ಪೂರ್ವ ಪ್ರಾಥಮಿಕ ವಿಭಾಗದವರನ್ನು ಒಳಗೊಂಡು ಸುಮಾರು ಎಪ್ಪತ್ತು ಶಿಕ್ಷಕರು ಭಾಗವಹಿಸಿದ್ದರು.