Hagaribommanahalli, Feb 28 : National Science Day was celebrated in Rashtrotthana Vidya Kendra – Hagaribommanahalli. National Science Day is celebrated to mark the discovery of the Raman Effect by Indian Physicist, Sir C V Raman on this day in 1928. In this relation a Science Week was celebrated from Feb 21 to till this day.
ಹಗರಿಬೊಮ್ಮನಹಳ್ಳಿ, ಫೆಬ್ರವರಿ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿ.ಬಿ.ಎಸ್.ಇ. ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ಫೆಬ್ರವರಿ 21 ರಿಂದ ಈ ದಿನದ ವರೆಗೆ ವಿಜ್ಞಾನ ಸಪ್ತಾಹವನ್ನು ಆಚರಿಸಲಾಯಿತು. ಪ್ರತಿನಿತ್ಯ ಪ್ರಾರ್ಥನಾ ಅವಧಿಯಲ್ಲಿ ಪ್ರತಿಯೊಂದು ಹಂತವಾರು ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳನ್ನು ಪ್ರದರ್ಶಿಸಿದರು. ಭಾರತದ ಶ್ರೇಷ್ಠ ಭೌತ ವಿಜ್ಞಾನಿ ಸರ್ ಸಿ. ವಿ. ರಾಮನ್ ಅವರ ಜೀವನ ಸಾಧನೆಗಳ ಕುರಿತು ಏಳನೇ ತರಗತಿ ವಿದ್ಯಾರ್ಥಿ ಕೆ. ಎಸ್. ಭುವನ್ ಮಾತನಾಡಿದನು. ಶಾಲೆಯ ಭೌತಶಾಸ್ತ್ರ ಅಧ್ಯಾಪಕರಾದ ಶ್ರೀ ರಾಮಕೃಷ್ಣನ್ ರವರು ಭಾರತೀಯ ವಿಜ್ಞಾನ ಹಾಗೂ ತಂತ್ರಜ್ಞಾನದ ವಿಕಾಸದ ಕುರಿತು ವಿವರಿಸಿದರು. ಪೂರ್ವ ಪ್ರಾಥಮಿಕ ವಿಭಾಗದಿಂದ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಅಭಿನಯ ಗೀತೆ, ನಾಟಕ ಹಾಗೂ ನೃತ್ಯವನ್ನು ಪ್ರದರ್ಶಿಸಿದರು. ಶಾಲೆಯ ಪ್ರಧಾನಾಚಾರ್ಯರಾದ ಶ್ರೀರಂಗನಾಥರವರು ವಿಜ್ಞಾನ, ಕೌಶಲ್ಯ, ಶಾಸ್ತ್ರ ಹಾಗೂ ಮೌಲ್ಯವು ಹೇಗೆ ಸಮ್ಮಿಲನವಾಗಿದೆ ಎಂದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮಧ್ಯಾಹ್ನದ ಅವಧಿಯಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.