Hagaribommanahalli, Aug 8: Nagara Panchami was celebrated in Rashtrotthana Vidya Kendra – Hagaribommanahalli. Sri Vinayak Bhat, School Sanskrit Teacher, performed Nagara Panchami Puja. Leaders of the Shala Vahini and teachers offered milk to the worshiped clay snake statue.The module Coordinator, Smt. Asha said, “Nagara Panchami is the festival that comes as a prelude to all festivals. It is a festival celebrated by sisters wishing for the benefit and protection of their brothers.”
ಹಗರಿಬೊಮ್ಮನಹಳ್ಳಿ, ಆಗಸ್ಟ್ 8: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಹಗರಿಬೊಮ್ಮನಹಳ್ಳಿಯಲ್ಲಿ ನಾಗರಪಂಚಮಿಯನ್ನು ಆಚರಿಸಲಾಯಿತು. ಶಾಲಾ ಸಂಸ್ಕೃತ ಶಿಕ್ಷಕರಾದ ಶ್ರೀ ವಿನಾಯಕ ಭಟ್ ಅವರು ನಾಗರ ಪಂಚಮಿ ಪೂಜೆಯನ್ನು ನೆರವೇರಿಸಿದರು. ಶಾಲಾ ವಾಹಿನಿಯ ನಾಯಕರು ಹಾಗೂ ಶಿಕ್ಷಕರು ಪೂಜಿಸಿದ ಮಣ್ಣಿನ ನಾಗರ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಿದರು.ಮಾಡ್ಯೂಲ್ ಕೋಆರ್ಡಿನೇಟರ್ ಶ್ರೀಮತಿ ಆಶಾರವರು ಮಾತನಾಡಿ “ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರಪಂಚಮಿ. ಸಹೋದರರಿಗೆ ಲಾಭ ಮತ್ತು ರಕ್ಷಣೆ ಸಿಗಲಿ ಎಂದು ಸಹೋದರಿಯರು ಹಾರೈಸಿ, ಆಚರಿಸುವ ಹಬ್ಬವಾಗಿದೆ” ಎಂಬುದಾಗಿ ನಾಗರ ಪಂಚಮಿಯ ವಿಶೇಷತೆ ಕುರಿತು ತಿಳಿಸಿದರು.