Hagaribommanahalli, Jan, 29- Feb, 5: Music Week was celebrated by the Music Department herein Rashtrotthana Vidya Kendra – Hagaribommanahalli. Students from classes 2 to 8 participated in the Music Week in large numbers. Every day, students from each class sang a mix of songs of various genres, such as patriotic songs, hymns, harvest songs, bhaavgeetha, vachanas, folk songs, philosophical songs, devotional songs, and entertained the gathering of teachers, parents, and students with musical delight.


ಹಗರಿಬೊಮ್ಮನಹಳ್ಳಿ, ಜ, 29- ಫೆ, 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಸಂಗೀತ ವಿಭಾಗದಿಂದ ಸಂಗೀತ ಸಪ್ತಾಹ ಆಚರಿಸಲಾಯಿತು. ತರಗತಿ 2 ರಿಂದ 8ನೇ ತರಗತಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ಸಪ್ತಾಹದಲ್ಲಿ ಭಾಗವಹಿಸಿದರು. ಪ್ರತಿ ದಿನವೂ ಒಂದೊಂದು ತರಗತಿಯ ವಿದ್ಯಾರ್ಥಿಗಳು ವಿವಿಧ ಪ್ರಕಾರಗಳನ್ನೊಳಗೊಂಡ ಮಿಶ್ರಣ ಹಾಡುಗಳೊಂದಿಗೆ ಅಂದರೆ ದೇಶಭಕ್ತಿಗೀತೆಗಳು, ಕೀರ್ತನೆಗಳು, ಸುಗ್ಗಿಹಾಡು, ಭಾವಗೀತೆ, ವಚನಗಳು, ಜಾನಪದ, ತತ್ವಪದ, ಭಕ್ತಿ ಗೀತೆಗಳನ್ನು ಹಾಡಿ ನೆರೆದ ಶಿಕ್ಷಕ-ಪೋಷಕರ ಹಾಗೂ ವಿದ್ಯಾರ್ಥಿಗಳ ಸಮೂಹಕ್ಕೆ ಸಂಗೀತ ರಸಾದೌತಣವನ್ನು ಉಣಬಡಿಸಿದರು.