Home > News & Events>Mahatma Gandhi Jayanti & Lal Bahaddur Shastri Jayanti Celebration in RVK – Hagaribommanahalli

Hagaribommanahalli, October 2: Mahatma Gandhi Jayanti and Lal Bahadur Shastri Jayanti were celebrated herein Rashtrotthana Vidya Kendra – Hagaribommanahalli. Head of Department of Social Sciences Sri Nagaraja K. shared his opinion that “Gandhiji was inspired by the play ‘Satya Harishchandra’ and continued his life as a good student. He got rid of racism and untouchability. He moved forward with the guidance of political guru Gopalkrishna Gokhale. Gandhiji’s movements through the path of non-violence and the path of truth were successful in bringing freedom to India”. Sri Nagaraja B.T., the Head of the English Department spoke about Lal Bahadur Shastriji, “Lal Bahadur Shastri, a freedom fighter who served as Prime Minister, was a true patriot. Inspired by Gandhiji and Sri Madan Mohan Malaviya, he served selflessly for our country. He raised his voice against casteism.” With the slogan ‘Jai Jawan Jai Kisan’, he helped the working class of the society and recalled the events of Shastriji’s life saying that he was the first Prime Minister to be awarded ‘Bharat Ratna’ posthumously. Speaking on the occasion of the birth anniversary of the great people, Sri Sriranganath, the principal of the school, reminded us of the points to be adopted in our lives and shared the thoughts of these great freedom fighters that “Gandhiji and Lal Bahadur Shastri, who brought the concept of Swadeshi through the Panchayat Raj system and Charaka drive, inspired everyone with their hard work and honesty.”


ಹಗರಿಬೊಮ್ಮನಹಳ್ಳಿ, ಅಕ್ಟೋಬರ್ 2: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಹಗರಿಬೊಮ್ಮನಹಳ್ಳಿಯಲ್ಲಿ ಮಹಾತ್ಮಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಜಯಂತಿಯನ್ನು ಆಚರಿಸಲಾಯಿತು. ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ನಾಗರಾಜ ಕೆ. ಅವರು ಮಾತನಾಡಿ “ಗಾಂಧೀಜಿಯವರು ‘ಸತ್ಯ ಹರಿಶ್ಚಂದ್ರ’ ನಾಟಕದಿಂದ ಸ್ಫೂರ್ತಿ ಹೊಂದಿ, ಉತ್ತಮ ವಿದ್ಯಾರ್ಥಿಯಾಗಿ ಜೀವನ ಮುಂದುವರಿಸಿದರು. ವರ್ಣಭೇದ ನೀತಿ ಹಾಗೂ ಅಸ್ಪೃಶ್ಯತೆಯನ್ನು ತೊಡೆದು ಹಾಕಿದರು. ರಾಜಕೀಯ ಗುರುಗಳಾದ ಗೋಪಾಲಕೃಷ್ಣ ಗೋಖಲೆಯ ಮಾರ್ಗದರ್ಶನದೊಂದಿಗೆ ಮುನ್ನಡೆದರು. ಅಹಿಂಸಾ ಮಾರ್ಗ ಹಾಗೂ ಸತ್ಯ ಮಾರ್ಗದ ಮೂಲಕ ಗಾಂಧೀಜಿಯವರ ಚಳುವಳಿಗಳು ಭಾರತಕ್ಕೆ ಸ್ವತಂತ್ರ ತಂದು ಕೊಡುವಲ್ಲಿ ಯಶಸ್ವೀಯಾದವು” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು. ಆಂಗ್ಲ ವಿಭಾಗದ ಮುಖ್ಯಸ್ಥರಾದ ಶ್ರೀನಾಗರಾಜ. ಬಿ.ಟಿ ಯವರು ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಕುರಿತು ಮಾತನಾಡಿ “ದೇಶ ಕಂಡ ಅಪ್ರತಿಮ ಆಡಳಿತಗಾರ, ಪ್ರಧಾನ ಮಂತ್ರಿ ಆಗಿ ಸೇವೆ ಸಲ್ಲಿಸಿದ ಸ್ವಾತಂತ್ರ್ಯ ಹೋರಾಟಗಾರರಾದ ಲಾಲ್‌ ಬಹದ್ಧೂರ್ ಶಾಸ್ತ್ರಿಯವರು ಅಪ್ಪಟ ದೇಶಾಭಿಮಾನಿ ಆಗಿದ್ದರು. ಗಾಂಧೀಜಿ ಹಾಗೂ ಶ್ರೀ ಮದನ್ ಮೋಹನ ಮಾಲವೀಯ ಅವರಿಂದ ಸ್ಪೂರ್ತಿ ಹೊಂದಿ ನಮ್ಮ ದೇಶಕ್ಕಾಗಿ ನಿಃಸ್ವಾರ್ಥ ಸೇವೆ ಸಲ್ಲಿಸಿದರು. ಜಾತಿಭೇದದ ವಿರುದ್ಧ ಧ್ವನಿಯೆತ್ತಿದರು. ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷಣೆಯೊಂದಿಗೆ ಸಮಾಜದ ಶ್ರಮಿಕ ವರ್ಗದವರಿಗೆ ಸಹಾಯ ಮಾಡಿದರು. ಮರಣದ ನಂತರ ‘ಭಾರತರತ್ನ’ ಪ್ರಶಸ್ತಿ ಪಡೆದ ಮೊದಲ ಪ್ರಧಾನಿ ಶಾಸ್ತ್ರೀಯವರು ಎನ್ನುತ್ತಾ ಶಾಸ್ತ್ರಿಜೀಯವರ ಜೀವನದ ಘಟನೆಗಳನ್ನು ನೆನಪಿಸಿದರು. ಶಾಲೆಯ ಪ್ರಧಾನಾಚಾರ್ಯರಾದ ಶ್ರೀರಂಗನಾಥರವರು ಮಾತನಾಡಿ ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆ ಪ್ರಯುಕ್ತ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳನ್ನು ನೆನಪಿಸುತ್ತಾ “ಪಂಚಾಯತ್ ರಾಜ್ ವ್ಯವಸ್ಥೆ, ಚರಕ ಚಾಲನೆಯ ಮೂಲಕ ಸ್ವದೇಶಿ ಪರಿಕಲ್ಪನೆಯನ್ನು ತಂದ ಸರಳತೆಯ ಹರಿಕಾರರಾದ ಗಾಂಧೀಜಿಯವರು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರು ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಸಕಲರಿಗೂ ಸ್ಪೂರ್ತಿದಾಯಕರಾದರು” ಎಂಬುದಾಗಿ ಈ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರ ಚಿಂತನೆಯನ್ನು ಹಂಚಿಕೊಂಡರು.

Scroll to Top