“Tilak promoted many social reforms. He was very concerned in favor of prohibition of alcohol. His ideas on education and political life were very influential. Azad believed that India’s future lay in socialism” – Pradhanacharya, Sri SuviraHagaribommanahalli, July 23: The birth anniversary of patriot Lokmanya Tilak and Chandrasekhar Azad was celebrated in Rashtrotthana Vidya Kendra – Hagaribommanahalli.The program started with a patriotic song. Students of primary section performed in Tilak’s costume. Students spoke about Tilak and his inspirational words.
“ತಿಲಕರು ಅನೇಕ ಸಾಮಾಜಿಕ ಸುಧಾರಣೆಗಳನ್ನು ಮುಂದಿಟ್ಟರು. ಮದ್ಯಪಾನ ನಿಷೇಧದ ಪರವಾಗಿ ಅವರಿಗೆ ಅತ್ಯಂತ ಕಳಕಳಿಯಿತ್ತು. ಶಿಕ್ಷಣ ಹಾಗೂ ರಾಜಕೀಯ ಜೀವನದ ಬಗ್ಗೆ ಅವರ ವಿಚಾರಗಳು ಬಹಳ ಪ್ರಭಾವಶಾಲಿಯಾಗಿದ್ದವು. ಆಜಾದರು ಭಾರತದ ಭವಿಷ್ಯವು ಸಮಾಜವಾದದಲ್ಲಿಯೇ ಇದೆ ಎಂದು ನಂಬಿದ್ದರು” – ಪ್ರಧಾನಾಚಾರ್ಯ, ಶ್ರೀ ಸುವಿರಾ ಹಗರಿಬೊಮ್ಮನಹಳ್ಳಿ, ಜುಲೈ 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಹಗರಿಬೊಮ್ಮನಹಳ್ಳಿಯಲ್ಲಿ ದೇಶಭಕ್ತ ಲೋಕಮಾನ್ಯ ತಿಲಕ್ ಹಾಗೂ ಚಂದ್ರಶೇಖರ್ ಆಜಾದ್ ಅವರ ಜಯಂತಿಯನ್ನು ಆಚರಿಸಲಾಯಿತು. ದೇಶಭಕ್ತಿ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ತಿಲಕ್ ಅವರ ವೇಷವನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ತಿಲಕ್ ಅವರ ಕುರಿತಾಗಿ ಮಾತನಾಡುತ್ತ ಅವರ ಪ್ರೇರಣಾದಾಯಕ ನುಡಿಗಳನ್ನು ಹೇಳಿದರು.