Hagaribommanahalli, Nov. 7: Gamakavachana and interpretation program was organized in collaboration with Department of Kannada and Culture, Government of Karnataka, in honour of Kannada Nadu-Nudi Namana herein Rashtrotthana Vidya Kendra – Hagaribommanahalli. Sri Veeresh, a Kannada teacher of Hagaribommanahalli, Rashtrotthana High School, spoke about the cultural heritage of Karnataka as the chief speaker for the program and said, “It was the wish of all the poets of the past to develop admiration for Kannada. Accordingly, Kannada should become the breath of all of us.” Karnataka Gamakakala Parishad, Vijayanagar District Unit President Smt. Pallavi Bhat and Information Scientist of Rashtrotthana Sharada Vidya Mandir Smt. Chitra Shastri recited Old Gannada and Nadugannada verses. Kannada Sahitya Parishad, Taluk Unit Hospet Women Representative Smt. Veeramma Hiremath and Hospet Tax Consultant and Auditor Sri Vishwanath D.interpreted Gamaka. Speaking, Smt. Veeramma Hiremath said, “Gamaka Kala is one of the 64 arts. Gamak Kala is responsible for the survival of Kannada literature. In Ramayana, Lava & Kusha sang Gamaka Gayana. Sri Ramachandra was a listener. Gamaka Kala has enhanced the taste of poetry from the History, Purana till today.”
ಹಗರಿಬೊಮ್ಮನಹಳ್ಳಿ, ನ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಕನ್ನಡ ನಾಡು ನುಡಿ ನಮನದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ಗಮಕವಾಚನ ಹಾಗೂ ವ್ಯಾಖ್ಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ವಕ್ತಾರರಾಗಿ ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಪ್ರೌಢಶಾಲೆಯ ಕನ್ನಡ ಶಿಕ್ಷಕರಾದ ಶ್ರೀ ವೀರೇಶರವರು ಕರ್ನಾಟಕದ ಸಂಸ್ಕೃತಿ ಪರಂಪರೆಯ ಕುರಿತು ಮಾತನಾಡುತ್ತಾ “ಕನ್ನಡದ ಮೇಲೆ ಅಭಿಮಾನ ಬೆಳೆಸುವುದು ಹಿಂದಿನ ಕವಿಗಳೆಲ್ಲರ ಆಶಯವಾಗಿತ್ತು. ಅದರಂತೆ ಕನ್ನಡ ನಮ್ಮೆಲ್ಲರ ಉಸಿರಾಗಬೇಕು” ಎಂದು ಹೇಳಿದರು. ಕನ್ನಡದ ಮೇಲೆ ಗಮಕ ಕಲೆಯ ಪ್ರಭಾವ ಹೇಗಿದೆ ಎಂಬುದನ್ನು ತಿಳಿಸಿದರು. ಕರ್ನಾಟಕ ಗಮಕಕಲಾ ಪರಿಷತ್, ವಿಜಯನಗರದ ಜಿಲ್ಲಾ ಘಟಕ ಅಧ್ಯಕ್ಷರಾದ ಶ್ರೀಮತಿ ಪಲ್ಲವಿ ಭಟ್ ಹಾಗೂ ರಾಷ್ಟ್ರೋತ್ಥಾನ ಶಾರದಾ ವಿದ್ಯಾ ಮಂದಿರದ ಇನ್ಫಾರ್ಮೇಶನ್ ಸೈಂಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಶ್ರೀಮತಿ ಚಿತ್ರ ಶಾಸ್ತ್ರಿಯವರು ಹಳೆಗನ್ನಡ, ನಡುಗನ್ನಡ ಪದ್ಯಗಳ ಗಮಕವಾಚನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಹೊಸಪೇಟೆಯ ಮಹಿಳಾ ಪ್ರತಿನಿಧಿಯಾದ ಶ್ರೀಮತಿ ವೀರಮ್ಮ ಹಿರೇಮಠ್ ಅವರು ಹಾಗೂ ಹೊಸಪೇಟೆಯ ಟ್ಯಾಕ್ಸ್ ಕನ್ಸಲ್ಟಂಟ್ ಮತ್ತು ಆಡಿಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಶ್ರೀ ವಿಶ್ವನಾಥ ಡಿ. ಅವರು ಗಮಕ ವ್ಯಾಖ್ಯಾನ ಮಾಡಿದರು. ಶ್ರೀಮತಿ ವೀರಮ್ಮ ಹಿರೇಮಠ್ ಅವರು ಮಾತನಾಡುತ್ತ, “64 ಕಲೆಗಳಲ್ಲಿ ಗಮಕ ಕಲೆಯೂ ಒಂದು. ಕನ್ನಡ ಸಾಹಿತ್ಯದ ಉಳಿವಿಗೆ ಗಮಕ ಕಲೆಯೂ ಕಾರಣವಾಗಿದೆ. ರಾಮಾಯಣದಲ್ಲಿ ಲವಕುಶರು ಗಮಕ ಗಾಯನ ಮಾಡಿದರು. ಶ್ರೀರಾಮಚಂದ್ರನು ಶ್ರೋತೃನಾಗಿದ್ದನು. ಇತಿಹಾಸ ಪುರಾಣದಿಂದ ಇಂದಿನವರೆಗೂ ಗಮಕ ಕಲೆಯು ಕಾವ್ಯದ ರಸಾನುಭವವನ್ನು ಹೆಚ್ಚಿಸಿದೆ” ಎಂದು ಹೇಳಿದರು.