International Mother Tongue Day @ RVK – Hagaribommanahalli

Home > News & Events > International Mother Tongue Day @ RVK – Hagaribommanahalli

Feb 21 : International Mother Tongue Day was celebrated herein Rashtrotthana Vidya Kendra – Hagaribommnahalli.

ಹಗರಿಬೊಮ್ಮನಹಳ್ಳಿ, ಫೆಬ್ರವರಿ 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿ.ಬಿ.ಎಸ್.ಇ. ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಾತೃಭಾಷಾ ದಿವಸವನ್ನು ಆಚರಿಸಲಾಯಿತು.
ಏಳನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಗಗನ ಮಾತೃಭಾಷೆಯ ವಿಶಿಷ್ಟತೆ ಮತ್ತು ಕನ್ನಡ ಭಾಷೆಯಲ್ಲಿ ಇರುವಂತ ಸೊಬಗನ್ನು ಕುರಿತು ಮಾತನಾಡುತ್ತಾ “ನಾವೆಲ್ಲರೂ ಬೇರೆ ಭಾಷೆಯನ್ನ ಕಲಿಯುವುದು ಅವಶ್ಯಕ. ಆದರೆ ನಮ್ಮ ಮಾತೃಭಾಷೆಗೆ ನಾವು ಆದ್ಯತೆಯನ್ನು ಕೊಡಬೇಕು. ಸದಾ ನಮ್ಮ ಮಾತೃಭಾಷೆಯನ್ನು ಮಾತನಾಡುವುದರ ಮೂಲಕ ಉಳಿಸಿ ಬೆಳೆಸುವಂತಹ ಜವಾಬ್ದಾರಿಯು ನಮ್ಮ ನಿಮ್ಮೆಲ್ಲರದಾಗಿದೆ. ನಾವೆಲ್ಲರೂ ಮಾತೃಭಾಷೆಯನ್ನು ಮಾತನಾಡುವುದರ ಮೂಲಕ ಉಳಿಸಿ ಬೆಳೆಸೋಣ” ಎಂದು ತಿಳಿಸಿದಳು. ಈ ಸಂದರ್ಭದಲ್ಲಿ 4ನೇ ಸ್ಥರದ ಸಂಯೋಜಕರಾದ ಶ್ರೀಮತಿ ಶ್ರೀದೇವಿಯವರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Scroll to Top