Heritage Fest 2023-24 @ RVK – Hagaribommanahalli

Home > News & Events > > Heritage Fest 2023-24 @ RVK – Hagaribommanahalli

Heritage fest – RVK CBSE Schools

Hagaribommanahalli, Dec 21 & 22: Heritage Fest 2023-24 was organised herein Rashtrotthana Vidya Kendra. 87 children of 7th & 8th Std from 9 different CBSE Schools participated in the event. Students presented their regional arts through singing, dancing and short plays and viewed the historical monuments of Hampi.
Sri Hari Ravikumar; Sri Anand Babu, Senior Student of School; Dr. Vinay Simha, Correspondent of School; Sri Ranganatha H A, Pradhanacharya and Sri Arun Kumar Korgal, School SMC Member, graced the inaugural ceremony.
Resource Person, Sri Hari Ravikumar presented interesting things about history, its significance, great Indian heritage, Vedas, Upanishads, Ramayana and Mahabharata through various activities.

ಹಗರಿಬೊಮ್ಮನಹಳ್ಳಿ, ಡಿಸೆಂಬರ್‌ 21 & 22: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಪಾರಂಪರಿಕ ಉತ್ಸವ 2023-24ನ್ನು ಆಯೋಜಿಸಲಾಗಿತ್ತು. ಕೇಂದ್ರ ಪಠ್ಯಕ್ರಮದ 9 ವಿವಿಧ ಶಾಲೆಗಳ 7 ಹಾಗೂ 8ನೇ ತರಗತಿಯ ಒಟ್ಟು 87 ಮಕ್ಕಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ತಮ್ಮ ಪ್ರಾದೇಶಿಕ ಕಲೆಗಳನ್ನು ಗೀತಗಾಯನ, ನೃತ್ಯ ಮತ್ತು ಕಿರು ನಾಟಕಗಳ ಮೂಲಕ ಪ್ರಸ್ತುತಪಡಿಸಿದರು ಹಾಗೂ ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಹರಿ ರವಿಕುಮಾರ್‌; ಶ್ರೀ ಆನಂದ್ ಬಾಬು, ಇತಿಹಾಸ ಸಂಶೋಧಕ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ; ಶಾಲೆಯ ಕರೆಸ್ಪಾಂಡೆಂಟ್ ಆದ ಡಾ. ವಿನಯ ಸಿಂಹ; ಪ್ರಧಾನಾಚಾರ್ಯರಾದ ಶ್ರೀ ರಂಗನಾಥ ಎಚ್‌. ಎ. ಮತ್ತು ಶಾಲಾ ಎಸ್.ಎಂ.ಸಿ.ಯ ಸದಸ್ಯರಾದ ಶ್ರೀ ಅರುಣ್ ಕುಮಾರ್ ಕೋರ್ಗಲ್ ಅವರು ಉಪಸ್ಥಿತರಿದ್ದರು.
ಮುಖ್ಯ ವಕ್ತಾರರಾದ ಶ್ರೀ ಹರಿ ರವಿಕುಮಾರ್‌ ಅವರು ಹಲವಾರು ಚಟುವಟಿಕೆಗಳ ಮೂಲಕ ಇತಿಹಾಸ, ಅದರ ಮಹತ್ವ, ಭಾರತೀಯ ಭವ್ಯ ಪರಂಪರೆ, ವೇದ, ಉಪನಿಷತ್ತು, ರಾಮಾಯಣ ಮತ್ತು ಮಹಾಭಾರತಗಳ ಕುರಿತು ಆಸಕ್ತಿಕರ ವಿಚಾರಗಳನ್ನು ಪ್ರಸ್ತುತಪಡಿಸಿದರು.

Scroll to Top