







Hagaribommanahalli, Mar. 7: A Sankalpa program was organised at Rashtrotthana Vidya Kendra – Hagaribommanahalli. The program was started with the foot worship of the parents under the guidance of the Sanskrit teacher of the school, Sri Vinayak Bhatt, to prepare the tenth-grade students for the next stage and make their future bright. Sri Nagaraj Guttedar, a lawyer from Gangavathi, arrived as the chief guest for this program and addressed the students, saying, “In this day and age, it is very rare to find Indian culture, ideals, values and culture in schools. But Rashtrotthana School is the only school that offers all of them together. You are lucky because children get culture along with education here. When we learn to self-criticise ourselves, we can live a prosperous life without any stumbling blocks. The ideals, values and culture learned in this school should be properly handed over to the next generation.” He guided the students. The Principal of the school, Sri Sriranganath, administered the oath to the students. The students of class X lit a lamp for the Akhand Bharat portrait made by the school’s art teacher, Sri Halesh, and received a certificate and a memento from their elders. The students sang the Ashaya Geeta with the direction and composition of the school’s music teacher, Sri Beerappa. The program was held in the presence of about 350 people.
ಹಗರಿಬೊಮ್ಮನಹಳ್ಳಿ, ಮಾ. 7: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ -ಹಗರಿಬೊಮ್ಮನಹಳ್ಳಿಯಲ್ಲಿ ಸಂಕಲ್ಪ ಕಾರ್ಯಕ್ರಮ ಆಚರಿಸಲಾಯಿತು. ಹತ್ತನೇ ತರಗತಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಸಂಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಂದಿನ ಹಂತಕ್ಕೆ ಅಣಿಗೊಳಿಸಿ ಅವರ ಭವಿಷ್ಯ ಉಜ್ವಲವಾಗಿರಲೆಂದು ಶಾಲೆಯ ಸಂಸ್ಕೃತ ಶಿಕ್ಷಕರಾದ ಶ್ರೀ ವಿನಾಯಕ ಭಟ್ಟರ ಮಾರ್ಗದರ್ಶನದೊಂದಿಗೆ ಮಾತಾಪಿತರ ಪಾದಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗಂಗಾವತಿಯ ನ್ಯಾಯವಾದಿಗಳಾಗಿದ್ದ ಶ್ರೀ ನಾಗರಾಜ್ಗು ತ್ತೇದಾರ್ ಅವರು ಆಗಮಿಸಿದ್ದು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ಈಗಿನ ಕಾಲದಲ್ಲಿ ಶಾಲೆಗಳಲ್ಲಿ ಭಾರತೀಯ ಸಂಸ್ಕೃತಿ, ಆದರ್ಶಗಳು, ಮೌಲ್ಯಗಳು ಹಾಗೂ ಸಂಸ್ಕಾರ ಸಿಗುವುದು ಅತಿ ವಿರಳ. ಆದರೆ ಅವೆಲ್ಲವನ್ನು ಒಟ್ಟಿಗೆ ನೀಡುತ್ತಿರುವ ಏಕೈಕ ಶಾಲೆ ರಾಷ್ಟ್ರೋತ್ಥಾನ ಶಾಲೆ. ಇಲ್ಲಿ ಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕಾರ ಲಭಿಸುತ್ತಿರುವುದರಿಂದ ನೀವು ಅದೃಷ್ಟಶಾಲಿಗಳು. ನಮ್ಮನ್ನು ನಾವು ಆತ್ಮವಿಮರ್ಶೆ ಮಾಡುವುದನ್ನು ಕಲಿತಾಗ ಎಲ್ಲೂ ಎಡವದೇ ಸುಭಿಕ್ಷವಾಗಿ ಜೀವನ ನಡೆಸಬಹುದು. ಈ ಶಾಲೆಯಲ್ಲಿ ಕಲಿತ ಆದರ್ಶಗಳು, ಮೌಲ್ಯಗಳು, ಸಂಸ್ಕಾರಗಳನ್ನು ಯಥಾವತ್ತಾಗಿ ಮುಂದಿನ ತಲೆಮಾರಿಗೆ ಹಸ್ತಾಂತರ ಮಾಡಬೇಕು” ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಶಾಲೆಯ ಪ್ರಧಾನಾಚಾರ್ಯರಾದ ಶ್ರೀ ಶ್ರೀರಂಗನಾಥ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ಹಾಲೇಶರವರು ನಿರ್ಮಿಸಿದ ಅಖಂಡ ಭಾರತ ಭಾವಚಿತ್ರಕ್ಕೆ ಹತ್ತನೇ ತರಗತಿಯ ವಿದ್ಯಾರ್ಥಿಗಳು ದೀಪ ಬೆಳಗಿಸಿ, ಹಿರಿಯರಿಂದ ಪ್ರಮಾಣ ಪತ್ರ ಹಾಗೂ ಸ್ಮರಣಿಕೆಯನ್ನು ಪಡೆದರು. ಶಾಲೆಯ ಸಂಗೀತ ಶಿಕ್ಷಕರಾದ ಶ್ರೀ ಬೀರಪ್ಪ ಅವರ ನಿರ್ದೇಶನ ಹಾಗೂ ರಾಗ ಸಂಯೋಜನೆಯೊಂದಿಗೆ ವಿದ್ಯಾರ್ಥಿಗಳು ಆಶಯ ಗೀತೆಯನ್ನು ಹಾಡಿದರು. ಸುಮಾರು 350 ಜನರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.