




Hagaribommanahalli, Jan. 26: The 77th Republic Day was celebrated in Rashtrotthana Vidya Kendra – Hagaribommanahalli. Sri Basavanagouda, Secretary of Hagaribommanahalli Rashtrotthana Vidya Kendra, hoisted the flag and said, “The Constitution of India is the highest and greatest constitution. This country is the country of the highest democracy. Ours is the country that gave birth to great patriots. It has an eternal culture and is Vedic. 150 years have passed since the creation of ‘Vande Mataram’, which transcends all countries, provinces and regions. Seventy years have passed since the construction of the great Somnath Temple. By 2047, our country should be prosperous. Let us join hands and lead this country forward, singing the beginning of India’s glorious era.”
ಹಗರಿಬೊಮ್ಮನಹಳ್ಳಿ, ಜ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿಗಳಾದ ಶ್ರೀ ಬಸವನಗೌಡರು ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತ, “ಭಾರತದ ಸಂವಿಧಾನ ಅತ್ಯಂತ ಉನ್ನತ ಹಾಗೂ ಶ್ರೇಷ್ಠ ಸಂವಿಧಾನವಾಗಿದೆ. ಈ ದೇಶ ಅತ್ಯಂತ ಉನ್ನತ ಪ್ರಜಾಪ್ರಭುತ್ವದ ದೇಶವಾಗಿದೆ. ಶ್ರೇಷ್ಠ ದೇಶಭಕ್ತರಿಗೆ ಜನ್ಮ ಕೊಟ್ಟ ದೇಶ ನಮ್ಮದು. ಸನಾತನ ಸಂಸ್ಕೃತಿಯನ್ನು ಹೊಂದಿದ್ದು ,ವೇದಮಯವಾಗಿದೆ. ದೇಶ,ಪ್ರಾಂತ್ಯ, ಪ್ರದೇಶಗಳೆಲ್ಲವನ್ನು ಮೀರಿದ ‘ವಂದೇ ಮಾತರಂ’ ರಚನೆಯಾಗಿ 150 ವರ್ಷಗಳು ಕಳೆದಿವೆ. ಶ್ರೇಷ್ಠ ಸೋಮನಾಥ ಮಂದಿರ ನಿರ್ಮಾಣವಾಗಿ ಎಪ್ಪತ್ತು ವರ್ಷಗಳು ಕಳೆದಿವೆ. 2047ರ ಹೊತ್ತಿಗೆ ನಮ್ಮ ದೇಶ ಸಮೃದ್ಧಿಯುತವಾಗಬೇಕು. ಭಾರತದ ವೈಭವಶಾಲೀಯುಗಕ್ಕೆ ನಾಂದಿ ಹಾಡುತ್ತಾ ಹೆಗಲುಕೊಟ್ಟು ಈ ದೇಶವನ್ನು ಮುಂದೆ ನಡೆಸೋಣ” ಎಂದರು.