Hagaribommanahalli, Dec. 28: Rashtrotthana Vidya Kendra – Hagaribommanahalli celebrated the Rashtrotsava with the theme “Ujjwala Bharat”.Sri. Y. M. Satish of Ballari, a member of the Legislative Council, was the chief guest for the program. Speaking, the chief guest said, “Rivers should not be polluted, because they are our lifelines. We should never forget the country; the welfare of the country should be our first priority. We should not only be those who receive from the society, but also be citizens who contribute to the society. Taking care of the environment is the mark of true patriotism. The responsibility to protect nature, society and the country lies with all of us.” Sri N. Dinesh Hegde, General Secretary of Rashtrotthana Parishat, introduced Rashtrotthana and gave a guiding message, saying, “Rashtrotthana is working in all areas of literature, service, health, education and is serving to inculcate Indian culture, values ​​and national sentiment in children. Rashtrotthana aims to build personality through education and create a powerful society. Our India is the only country that has spread the message of Vasudaiva Kutumbakam to the world. Today, India is emerging for the world to see with its great heritage and modern achievements. Due to this, our India will become Vishwaguru Bharat in the world.”Later, performances such as Ghosh, Danda Prayogi, Lejim, Hoops, Niyuddha, Pyramid, Pooja Kunita and cultural programs were held.The program concluded with a collective singing of Vande Mataram, reflecting unity, patriotism and national pride, to commemorate the 150th anniversary of the composition of the immortal national anthem, “Vande Mataram”.

ಹಗರಿಬೊಮ್ಮನಹಳ್ಳಿ, ಡಿ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ “ಉಜ್ವಲ ಭಾರತ” ಎಂಬ ವಿಷಯವಸ್ತುವಿನೊಂದಿಗೆ ರಾಷ್ಟ್ರೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಬಳ್ಳಾರಿಯ ಶ್ರೀ. ವೈ. ಎಂ. ಸತೀಶ ರವರು ಆಗಮಿಸಿದ್ದರು. ಮುಖ್ಯ ಅತಿಥಿಗಳು ಮಾತನಾಡಿ “ನದಿಗಳನ್ನು ಕಲುಷಿತಗೊಳಿಸಬಾರದು, ಏಕೆಂದರೆ ಅವೇ ನಮ್ಮ ಜೀವನಾಡಿಗಳು. ದೇಶವನ್ನು ಎಂದಿಗೂ ಮರೆಯಬಾರದು; ದೇಶದ ಹಿತವೇ ನಮ್ಮ ಮೊದಲ ಆದ್ಯತೆ ಆಗಬೇಕು.ನಾವು ಸಮಾಜದಿಂದ ಪಡೆಯುವವರಷ್ಟೇ ಅಲ್ಲ, ಸಮಾಜಕ್ಕೆ ಕೊಡುಗೆ ನೀಡುವ ನಾಗರಿಕರಾಗಬೇಕು. ಪರಿಸರದ ಕಾಳಜಿ ವಹಿಸುವುದೇ ನಿಜವಾದ ದೇಶಪ್ರೇಮದ ಗುರುತು. ಪ್ರಕೃತಿ, ಸಮಾಜ ಮತ್ತು ದೇಶವನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ” ಎಂದು ಹೇಳಿದರು.ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ.ದಿನೇಶ್ ಹೆಗಡೆಯವರು ರಾಷ್ಟ್ರೋತ್ಥಾನದ ಪರಿಚಯವನ್ನು ಮಾಡಿ “ರಾಷ್ಟ್ರೋತ್ಥಾನವು ಸಾಹಿತ್ಯ, ಸೇವೆ ,ಆರೋಗ್ಯ, ಶಿಕ್ಷಣ ಎಲ್ಲ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಾ ಭಾರತೀಯ ಸಂಸ್ಕೃತಿ, ಮೌಲ್ಯಗಳು ಮತ್ತು ರಾಷ್ಟ್ರಭಾವನೆಯನ್ನು ಮಕ್ಕಳಲ್ಲಿ ಬೆಳೆಸುವ ಸೇವೆ ಸಲ್ಲಿಸುತ್ತಿದೆ. ರಾಷ್ಟ್ರೋತ್ಥಾನ ಶಿಕ್ಷಣದ ಮೂಲಕ ವ್ಯಕ್ತಿತ್ವ ನಿರ್ಮಾಣ ಮಾಡಿ ಶಕ್ತಿಶಾಲಿ ಸಮಾಜವನ್ನು ರೂಪಿಸುವ ಧ್ಯೇಯ ಹೊಂದಿದೆ. ವಸುದೈವ ಕುಟುಂಬಕಂ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಏಕೈಕ ದೇಶ ನಮ್ಮ ಭಾರತ. ಇಂದು ಭಾರತ ತನ್ನ ಶ್ರೇಷ್ಠ ಪರಂಪರೆ ಮತ್ತು ಆಧುನಿಕ ಸಾಧನೆಗಳೊಂದಿಗೆ ವಿಶ್ವವೇ ನೋಡುವಂತೆ ಹೊರಹೊಮ್ಮುತ್ತಿದೆ. ಇದರಿಂದ ಜಗತ್ತಿನಲ್ಲಿ ನಮ್ಮ ಭಾರತ ವಿಶ್ವಗುರು ಭಾರತವಾಗಲಿದೆ” ಎಂದು ದಿಕ್ಸೂಚಿ ಮಾರ್ಗದರ್ಶನ ನೀಡಿದರು. ನಂತರದಲ್ಲಿ ಪ್ರದರ್ಶನಗಳಾದ ಘೋಷ್, ದಂಡ ಪ್ರಯೋಗ , ಲೇಜಿಮ್, ಹೂಪ್ಸ್, ನಿಯುದ್ಧ, ಪಿರಮಿಡ್ ,ಪೂಜಾ ಕುಣಿತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮವನ್ನು ಅಮರ ರಾಷ್ಟ್ರಗೀತೆಯಾದ “ವಂದೇ ಮಾತರಂ” ರಚನೆಯ 150ನೇ ವರ್ಷಾಚರಣೆಯ ಸ್ಮರಣಾರ್ಥವಾಗಿ, ಏಕತೆಯನ್ನು, ದೇಶಭಕ್ತಿಯನ್ನು ಹಾಗೂ ರಾಷ್ಟ್ರೀಯ ಹೆಮ್ಮೆಯನ್ನು ಪ್ರತಿಬಿಂಬಿಸುವಂತೆ ಸಾಮೂಹಿಕ ವಂದೇ ಮಾತರಂ ಗಾಯನದೊಂದಿಗೆ ಮುಕ್ತಾಯಗೊಳಿಸಲಾಯಿತು.