Hagaribommanahalli, Nov. 1: “Let the basic education of children be in Kannada. Then Kannada language can be the official language in Karnataka. When farmers get skill development education in Kannada in rural areas, they will grow in technology. Even if English is the language for work, if Kannada is spoken fluently as the yard language, our Karnataka will develop all round.” Smt. Padma Vittal spoke on Karnataka Rajyotsava herein Rashtrotthana Vidya Kendra – Hagaribommanahalli.Karnataka Rajyotsava was celebrated herein Rashtrotthana Vidya Kendra – Hagaribommanahalli.The program was presided over by Sri Basavanagowda, Secretary of Hagaribommanahalli Rashtrotthana. Smt. Padma Vittal, Educational Adviser of Sharada Vidyamandir, was present as the chief speaker.Flag hoisting was done by the guest. The Chief Spokesperson Smt. Padma Vittal expressed the wish of the elders that “Karnataka by name; Kannada by breath”.
ಹಗರಿಬೊಮ್ಮನಹಳ್ಳಿ, ನ. 1: “ಮಕ್ಕಳಿಗೆ ಮೂಲ ಶಿಕ್ಷಣ ಕನ್ನಡದಲ್ಲಿ ಆಗಲಿ. ಆಗ ಕರ್ನಾಟಕದಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ಕನ್ನಡದಲ್ಲಿ ಕೌಶಲ್ಯಾಭಿವೃದ್ಧಿ ಶಿಕ್ಷಣ ದೊರೆತಾಗ ರೈತರು ತಂತ್ರಜ್ಞಾನದಲ್ಲಿ ಬೆಳವಣಿಗೆ ಹೊಂದುವರು. ದುಡಿಮೆಗೆ ಆಂಗ್ಲ ಭಾಷೆಯಾದರೂ ಅಂಗಳದ ಭಾಷೆಯಾಗಿ, ಮನೆ ಭಾಷೆಯಾಗಿ ಕನ್ನಡವನ್ನು ನಿರರ್ಗಳವಾಗಿ ಮಾತನಾಡಿದಾಗ ನಮ್ಮ ಕರ್ನಾಟಕ ಸರ್ವತೋಮುಖ ಅಭಿವೃದ್ಧಿ ಆಗುವುದು” ಎಂದು ಶ್ರೀಮತಿ ಪದ್ಮ ವಿಠ್ಠಲ್ ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾತನಾಡುತ್ತ ಅಭಿಪ್ರಾಯ ಪಟ್ಟರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೋತ್ಥಾನ ಸಂಸ್ಥೆ – ಹಗರಿಬೊಮ್ಮನಹಳ್ಳಿಯ ಕಾರ್ಯದರ್ಶಿಗಳಾದ ಶ್ರೀ ಬಸವನಗೌಡರು ವಹಿಸಿದ್ದರು. ಮುಖ್ಯ ವಕ್ತಾರರಾಗಿ ಶಾರದಾ ವಿದ್ಯಾಮಂದಿರದ ಶೈಕ್ಷಣಿಕ ಸಲಹೆಗಾರರಾದ ಶ್ರೀಮತಿ ಪದ್ಮಾ ವಿಠ್ಠಲ್ ಅವರು ಆಗಮಿಸಿದ್ದರು.ಅತಿಥಿಗಳು ಧ್ವಜಾರೋಹಣ ನೆರವೇರಿಸಿದರು. ಮುಖ್ಯ ವಕ್ತಾರರಾದ ಶ್ರೀಮತಿ ಪದ್ಮಾ ವಿಠ್ಠಲ್ ಅವರು “ಹೆಸರಾಗಲಿ ಕರ್ನಾಟಕ; ಉಸಿರಾಗಲಿ ಕನ್ನಡ” ಎಂಬ ಹಿರಿಯರ ಆಶಯವನ್ನು ವ್ಯಕ್ತಪಡಿಸಿದರು.