“This liberty was achieved through relentless efforts against British rule. Recognizing that our identity and our nation are intertwined, it is imperative that we safeguard our culture and cultural heritage to envision a thriving India by the year 2047”: Sri Basavanagowda: Independence Day Celebration RVK – Hagaribommanahalli.
Hagaribommanahalli, Aug 15: The 78th Independence Day was celebrated herein Rashtrotthana Vidya Kendra – Hagaribommanahalli.Sri Basavana Gowda, the secretary of Rashtrotthana, Hagaribommanahalli, who arrived as guests of the program, hoisted the flag. In the program, the co-director of Rashtrotthana Hagaribommanahalli, Sri Durganna; retired senior teachers Sri Somanagowda, Sri Kotrappa, Sri Karibasappa, all the heads of the Rashtrotthana Project, teaching staff, parents and students were present.
“ಬ್ರಿಟಿಷರ ವಿರುದ್ಧ ನಿರಂತರ ಹೋರಾಡಿ ಗಳಿಸಿದ್ದು ಈ ಸ್ವಾತಂತ್ರ್ಯ. ದೇಹ ಬೇರೆಯಲ್ಲ, ದೇಶ ಬೇರೆಯಲ್ಲ ಎಂಬ ಭಾವನೆಯಿಂದ ನಮ್ಮ ಸಂಸ್ಕೃತಿ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ 2047ರ ಹೊತ್ತಿಗೆ ಸಮೃದ್ಧ ಭಾರತವನ್ನು ನಾವು ಕಾಣುವಂತಾಗಬೇಕು”: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯ ಸ್ವಾತಂತ್ರ್ಯ ಮಹೋತ್ಸವದಲ್ಲಿ ಶ್ರೀ ಬಸವನಗೌಡ ಅವರ ಅಭಿಪ್ರಾಯ.
ಹಗರಿಬೊಮ್ಮನಹಳ್ಳಿ, ಆಗಸ್ಟ್ 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಬಸವನಗೌಡರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಸಂಸ್ಥೆಯ ಸಹಕಾರ್ಯದರ್ಶಿಗಳಾದ ಶ್ರೀ ದುರ್ಗಣ್ಣರವರು, ನಿವೃತ್ತ ಹಿರಿಯ ಶಿಕ್ಷಕರಾದ ಶ್ರೀ ಸೋಮನಗೌಡರು, ಶ್ರೀ ಕೊಟ್ರಪ್ಪರವರು, ಶ್ರೀ ಕರಿಬಸಪ್ಪರವರು, ರಾಷ್ಟ್ರೋತ್ಥಾನ ಪ್ರಕಲ್ಪದ ಎಲ್ಲ ಮುಖ್ಯಸ್ಥರು, ಶಿಕ್ಷಕ ವೃಂದದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.