Sankalpa program in RVK – Hagaribommanahalli

Home > News & Events>Sankalpa program in RVK – Hagaribommanahalli

Hagaribommanahalli, Mar. 19: A Sankalpa program was organized herein Rashtrotthana Vidya Kendra – Hagaribommanahalli. Sri Rajarama, a full-time worker of Rashtrotthana Parishad, graced the program. The program was started with the Pada puja of the parents under the guidance of the Sanskrit teacher of the school, Sri Vinayak Bhat, to prepare the tenth-grade students for the next stage and make their future bright. The Chief Guest spoke and said, “When willpower, intellect, and action are awakened, a person can achieve. Knowledge and morality are recognized in the three worlds. Father, mother, and teacher are symbols of knowledge. When you all understand the purpose of Rashtrotthana and Swayamsevak Sangh and get active, our historical heritage will save. Then the country will save.” The students of class X lit a lamp for the Akhand Bharat portrait created by the school’s art teacher, Sri Siddalingachari, and received a certificate and a memento from their elders. The students sang the Aashya Geeta with the direction and composition of the school’s music teacher, Sri Beerappa. About 350 people were present at the program.

ಹಗರಿಬೊಮ್ಮನಹಳ್ಳಿ, ಮಾ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಷ್ಟ್ರೋತ್ಥಾನ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾದ ಶ್ರೀ ರಾಜಾರಾಮ ಅವರು ಆಗಮಿಸಿದ್ದರು. ಹತ್ತನೇ ತರಗತಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಸಂಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಂದಿನ ಹಂತಕ್ಕೆ ಅಣಿಗೊಳಿಸಿ ಅವರ ಭವಿಷ್ಯ ಉಜ್ವಲವಾಗಿರಲೆಂದು ಶಾಲೆಯ ಸಂಸ್ಕೃತ ಶಿಕ್ಷಕರಾದ ಶ್ರೀ ವಿನಾಯಕ ಭಟ್ ಅವರ ಮಾರ್ಗದರ್ಶನದೊಂದಿಗೆ ಮಾತಾಪಿತರ ಪಾದಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಮುಖ್ಯ ಅತಿಥಿಗಳು ಮಾತನಾಡಿ “ಇಚ್ಛಾಶಕ್ತಿ ಬುದ್ಧಿಶಕ್ತಿ ಕ್ರಿಯಾಶಕ್ತಿ ಜಾಗೃತವಾದಾಗ ವ್ಯಕ್ತಿ ಸಾಧಿಸಲು ಸಾಧ್ಯ. ಜ್ಞಾನ ಮತ್ತು ಶೀಲಕ್ಕೆ ಮೂರು ಲೋಕಗಳಲ್ಲಿ ಮಾನ್ಯತೆ ಇದೆ. ತಂದೆ, ತಾಯಿ, ಗುರುಗಳು ಜ್ಞಾನದ ಸಂಕೇತ. ರಾಷ್ಟ್ರೋತ್ಥಾನ ಸ್ವಯಂ ಸೇವಕ ಸಂಘದ ಉದ್ದೇಶ ತಿಳಿದು ನೀವೆಲ್ಲರೂ ಕಾರ್ಯಪ್ರವೃತ್ತರಾದಾಗ ನಮ್ಮ ಇತಿಹಾಸ ಪರಂಪರೆ ಉಳಿಯುತ್ತದೆ. ಆಗ ದೇಶ ಉಳಿಯುತ್ತದೆ” ಎಂದರು.  ಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ಸಿದ್ದಲಿಂಗಾಚಾರಿಯವರು ನಿರ್ಮಿಸಿದ ಅಖಂಡ ಭಾರತ ಭಾವಚಿತ್ರಕ್ಕೆ ಹತ್ತನೇ ತರಗತಿಯ ವಿದ್ಯಾರ್ಥಿಗಳು ದೀಪ ಬೆಳಗಿಸಿ, ಹಿರಿಯರಿಂದ ಪ್ರಮಾಣ ಪತ್ರ ಹಾಗೂ ಸ್ಮರಣಿಕೆಯನ್ನು ಪಡೆದರು. ಶಾಲೆಯ ಸಂಗೀತ ಶಿಕ್ಷಕರಾದ ಶ್ರೀ ಬೀರಪ್ಪ ಅವರ ನಿರ್ದೇಶನ ಹಾಗೂ ರಾಗ ಸಂಯೋಜನೆಯೊಂದಿಗೆ ವಿದ್ಯಾರ್ಥಿಗಳು ಆಶಯ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಸುಮಾರು 350 ಜನರು ಉಪಸ್ಥಿತರಿದ್ದರು.

Scroll to Top