Hagaribommanahalli, Nov. 22: “The most auspicious month is Kartika month. It is an auspicious month. Kartika month is considered the last month of Chaturmasa. Divine powers gain special strength from this month. Kartika month is considered both wealth and religion. It is the religious duty of all Hindus to participate in the national struggle to save the nation,” said Matrubharti President Smt. Maithri Srinivasan, sharing her thoughts at the Kartika Deepotsava organized herein Rashtrotthana Vidya Kendra – Hagaribommanahalli in collaboration with Matrubharti. The program began with a devotional Cow Worship. After Tulsi Mata Aarti was performed. Later, all those present in the program came in a row and lit the lamp. Smt. Saritha Raghavendra, a member of Matru Bharati, spoke and said, “Festivals are a reflection of our culture. Festivals in India are all about celebration. Our ancestors have been celebrating festivals according to the seasons.” She explained the importance of the Tulsi festival and said that “The Tulsi plant is a plant that produces a lot of oxygen and purifies the environment around it.” Later, cultural programs were performed by the Matru Bharati team and students.
ಹಗರಿಬೊಮ್ಮನಹಳ್ಳಿ, ನ. 22: “ಅತ್ಯಂತ ಶ್ರೇಷ್ಠವಾದ ಮಾಸ ಕಾರ್ತಿಕ ಮಾಸ. ಇದು ಮಂಗಳಕರವಾದ ಮಾಸ. ಕಾರ್ತಿಕ ಮಾಸವನ್ನು ಚಾತುರ್ಮಾಸದ ಕೊನೆಯ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಈ ಮಾಸದಿಂದ ದೈವಿಕ ಶಕ್ತಿಗಳು ವಿಶೇಷವಾದ ಬಲವನ್ನು ಪಡೆದುಕೊಳ್ಳುತ್ತವೆ. ಕಾರ್ತಿಕ ಮಾಸದಲ್ಲಿ ಸಂಪತ್ತು ಮತ್ತು ಧರ್ಮ ಎರಡನ್ನು ಪರಿಗಣಿಸಲಾಗುತ್ತದೆ. ರಾಷ್ಟ್ರವನ್ನು ರಕ್ಷಿಸುವ ರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸುವುದು ಎಲ್ಲಾ ಹಿಂದೂಗಳ ಧಾರ್ಮಿಕ ಕರ್ತವ್ಯವಾಗಿದೆ” ಎಂದು ಮಾತೃಭಾರತೀ ಅಧ್ಯಕ್ಷರಾದ ಶ್ರೀಮತಿ ಮೈತ್ರಿ ಶ್ರೀನಿವಾಸನ್ ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಮಾತೃಭಾರತಿಯ ಸಹಕಾರದೊಂದಿಗೆ ನಡೆದ ಕಾರ್ತಿಕ ದೀಪೋತ್ಸವದಲ್ಲಿ ತಮ್ಮ ವಿಚಾರವನ್ನು ಹಂಚಿಕೊಂಡರು. ಕಾರ್ಯಕ್ರಮವು ಶ್ರದ್ಧಾಪೂರ್ವಕವಾದ ಗೋಪೂಜೆಯೊಂದಿಗೆ ಪ್ರಾರಂಭವಾಯಿತು. ತುಳಸಿ ಮಾತೆಗೆ ಆರತಿಯನ್ನು ಬೆಳಗಿದರು. ನಂತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರೂ ಸಾಲಾಗಿ ಬಂದು ದೀಪ ಬೆಳಗಿಸಿದರು. ಮಾತೃಭಾರತಿಯ ಸದಸ್ಯರಾದ ಶ್ರೀಮತಿ ಸರಿತಾ ರಾಘವೇಂದ್ರ ಅವರು ಮಾತನಾಡಿ “ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಭಾರತದಲ್ಲಂತೂ ಹಬ್ಬಗಳೆಂದರೆ ಸಂಭ್ರಮವೋ ಸಂಭ್ರಮ. ನಮ್ಮ ಪೂರ್ವಜರು ಋತುಮಾನಕ್ಕೆ ಅನುಗುಣವಾಗಿ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ” ಎನ್ನುತ್ತಾ, ತುಳಸಿ ಹಬ್ಬದ ಮಹತ್ವವನ್ನು ತಿಳಿಸಿ, “ತುಳಸಿ ಗಿಡವು ಹೆಚ್ಚು ಆಮ್ಲಜನಕವನ್ನು ನೀಡುವ ಸಸ್ಯವಾಗಿದ್ದು ತನ್ನ ಸುತ್ತಮುತ್ತಲಿನ ವಾತಾವರಣವನ್ನು ಶುಚಿಗೊಳಿಸುತ್ತದೆ” ಎಂದು ಹೇಳಿದರು. ನಂತರದಲ್ಲಿ ಮಾತೃಭಾರತಿ ತಂಡದಿಂದ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.