Saraswati Puja in RVK – Hagaribommanahalli

Home > News & Events>Saraswati Puja in RVK – Hagaribommanahalli

fi Saraswati Puja in RVK - Hagaribommanahalli
Saraswati Puja in RVK - Hagaribommanahalli
Saraswati Puja in RVK - Hagaribommanahalli1
Saraswati Puja in RVK - Hagaribommanahalli2
Saraswati Puja in RVK - Hagaribommanahalli3

Hagaribommanahalli, Feb. 3: Saraswati Puja was performed on the occasion of Vasant Panchami herein Rashtrotthana Vidya Kendra – Hagaribommanahalli. Bhajans were performed under the guidance of the school’s music teacher, Sri Beerappa.The school’s Sanskrit teacher, Sri Girish Bhat, performed Saraswati Puja for the students of class X. Sri Papanna, the head teacher of Rashtrotthana Kannada Medium High School, arrived and interacted with the students and said, “When learning any new subject, one should ask questions why? When? How? Even if there are many confusions and obstacles while learning, one should accept them all as a challenge. Vasant Panchami is a festival celebrated in Hinduism to remember Saraswati. May all the students attain complete education and become a wonderful asset to the country.”Prasad was distributed after the Maha Mangalarati.

ಹಗರಿಬೊಮ್ಮನಹಳ್ಳಿ, ಫೆ. 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ವಸಂತ ಪಂಚಮಿಯ ಪ್ರಯುಕ್ತ ಸರಸ್ವತಿ ಪೂಜೆಯನ್ನು ನೆರವೇರಿಸಲಾಯಿತು. ಶಾಲೆಯ ಸಂಗೀತ ಶಿಕ್ಷಕರಾದ ಶ್ರೀ ಬೀರಪ್ಪರವರ ಮಾರ್ಗದರ್ಶನದಲ್ಲಿ ಭಜನೆಯನ್ನು ಭಜಿಸಲಾಯಿತು. ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಶಾಲೆಯ ಸಂಸ್ಕೃತ ಶಿಕ್ಷಕರಾದ ಶ್ರೀ ಗಿರೀಶ ಭಟ್ಟರು ಸರಸ್ವತಿ ಪೂಜೆಯನ್ನು ನೆರವೇರಿಸಿದರು. ರಾಷ್ಟ್ರೋತ್ಥಾನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಪಾಪಣ್ಣ ಅವರು ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುತ್ತಾ “ಯಾವುದೇ ಹೊಸ ವಿಷಯವನ್ನು ಕಲಿಯುವಾಗ ಏಕೆ? ಯಾವಾಗ? ಹೇಗೆ? ಎಂದು ಪ್ರಶ್ನಿಸಬೇಕು. ಕಲಿಯುವಾಗ ಗೊಂದಲಗಳು, ಅಡೆತಡೆಗಳು ಹಲವಿದ್ದರೂ ಅದನ್ನೆಲ್ಲಾ ಸವಾಲಾಗಿ ಸ್ವೀಕರಿಸಬೇಕು. ವಸಂತ ಪಂಚಮಿ ಹಿಂದೂ ಧರ್ಮದಲ್ಲಿ ಸರಸ್ವತಿಯನ್ನು ನೆನೆದು ಆಚರಿಸಲ್ಪಡುವಂಥ ಹಬ್ಬ. ಎಲ್ಲ ವಿದ್ಯಾರ್ಥಿಗಳು ಸಕಲ ವಿದ್ಯೆಯನ್ನು ಪಡೆದು ದೇಶಕ್ಕೆ ಅದ್ಭುತ ಸಂಪತ್ತಾಗಲಿ” ಎಂದು ಹೇಳಿದರು. ಮಹಾ ಮಂಗಳಾರತಿಯ ನಂತರ ಪ್ರಸಾದ ವಿತರಿಸಲಾಯಿತು.

Scroll to Top