



Hagaribommanahalli, Feb. 1: An art and craft exhibition was organized herein Rashtrotthana Vidya Kendra –Hagaribommanahalli.Under the guidance of art and craft teacher Sri Siddalingachari, the students displayed their handicrafts, drawings and paintings.Sri Kotresh Talwar, a well-known painter of Hagaribommanahalli participated as the Chief Guest and inspired the children with his words. He said that the only thing that keeps us away from unnecessary things and makes us utilize our leisure time is drawing, we should have this good habit in our life.
ಹಗರಿಬೊಮ್ಮನಹಳ್ಳಿ, ಫೆ. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಕಲೆ ಮತ್ತು ಕರಕುಶಲ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕಲೆ ಮತ್ತು ಕರಕುಶಲ ಶಿಕ್ಷಕರಾದ ಶ್ರೀ ಸಿದ್ಧಲಿಂಗಾಚಾರಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಾವು ಮಾಡಿದ ಕರಕುಶಲ ಕೃತಿ, ರೇಖಾಚಿತ್ರ ಮತ್ತು ವರ್ಣಚಿತ್ರವನ್ನು ಪ್ರದರ್ಶಿಸಿದರು.ಹಗರಿಬೊಮ್ಮನಹಳ್ಳಿಯ ಕಲಾವಿದರಾದ ಶ್ರೀ ಕೊಟ್ರೇಶ್ ತಲವಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಮಾತುಗಳಿಂದ ಮಕ್ಕಳಿಗೆ ಸ್ಫೂರ್ತಿ ನೀಡಿದರು. ಅನಗತ್ಯ ವಿಷಯಗಳಿಂದ ನಮ್ಮನ್ನು ದೂರವಿಡುವ ಮತ್ತು ವಿರಾಮ ಸಮಯವನ್ನು ಬಳಸಿಕೊಳ್ಳುವಂತೆ ಮಾಡುವ ಏಕೈಕ ವಿಷಯವೆಂದರೆ ಚಿತ್ರ ಬಿಡಿಸುವುದು, ನಮ್ಮ ಜೀವನದಲ್ಲಿ ಈ ಉತ್ತಮ ಅಭ್ಯಾಸವನ್ನು ನಾವು ಹೊಂದಿರಬೇಕು ಎಂದು ಅವರು ಹೇಳಿದರು.