Annual Games 2024-25 in RVK – Hagaribommanahalli

Home > News & Events>Annual Games 2024-25 in RVK – Hagaribommanahalli

Hagaribommanahalli, Aug 28, 29: The ‘Annual Games 2024-25’ was organized herein Rashtrotthana Vidya Kendra – Hagaribommanahalli.Sri Vitthal, Retired soldier CRPF, arrived as a guest.With the guidance of seniors and physical education teachers, sports leaders and channel leaders from Hagaribommanahalli Gurubhavan Anjaneya temple carried the sports torch and lit the sports lamp in the presence of dignitaries.Following the placement of floral tributes by the esteemed guests on Major Dhyan Chand’s portrait, the students remarked, “In what ways did Dhyan Chand enhance India’s status in the sport of hockey? Under his leadership, the Indian hockey team secured three consecutive Olympic gold medals in 1928, 1932, and 1936, and he was honoured with the Padma Bhushan in 1955” thus relevant information was provided.Later, Sri Vitthal inaugurated the program and said, “We are celebrating the National Sports Day to commemorate the birth anniversary of Major Dhyan Chand, who made sports leaders of the country proud, with the aim of creating awareness about the values of sports including discipline, hard work, sportsmanship and team work, about the importance of physical activities and his career. He shared some experiences.Sri Durganna spoke about the importance of maintaining physical fitness and mental health.Later, the sports programs started with ‘Rope-pulling’ game by the students of primary section.

ಹಗರಿಬೊಮ್ಮನಹಳ್ಳಿ, ಆಗಸ್ಟ್ 28, 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ‘ವಾರ್ಷಿಕ ಕ್ರೀಡಾಕೂಟ 2024-25’ನ್ನು ಆಯೋಜಿಸಲಾಗಿತ್ತು.ಸಿ.ಆರ್.ಪಿ .ಎಫ್ . ನಿವೃತ್ತ ಸೈನಿಕರಾದ ಶ್ರೀ ವಿಠ್ಠಲ್ ರವರು ಅತಿಥಿಗಳಾಗಿ ಆಗಮಿಸಿದ್ದರು. ಹಿರಿಯ ಹಾಗೂ ದೈಹಿಕ ಶಿಕ್ಷಕರ ಮಾರ್ಗದರ್ಶನದೊಂದಿಗೆ ಹಗರಿಬೊಮ್ಮನಹಳ್ಳಿ ಗುರುಭವನ ಆಂಜನೇಯ ದೇವಸ್ಥಾನದಿಂದ ಕ್ರೀಡಾ ನಾಯಕರು ಹಾಗೂ ವಾಹಿನಿಯ ನಾಯಕರು ಕ್ರೀಡಾ ಜ್ಯೋತಿಯನ್ನು ಹೊತ್ತು ತಂದು ಗಣ್ಯರ ಸಮ್ಮುಖದಲ್ಲಿ ಕ್ರೀಡಾ ದೀಪವನ್ನು ಬೆಳಗಿಸಿದರು.ಗೌರವಾನ್ವಿತ ಅತಿಥಿಗಳು ಮೇಜರ್ ಧ್ಯಾನಚಂದ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ವಿದ್ಯಾರ್ಥಿಗಳು “ಧ್ಯಾನಚಂದ್ ಅವರು ಹಾಕಿ ಆಟದಲ್ಲಿ ಭಾರತವನ್ನು ಹೇಗೆ ಉನ್ನತೀಕರಿಸಿದರು? ಎಂಬುದರ ಬಗ್ಗೆ ಉಲ್ಲೇಖಿಸುತ್ತಾ ಧ್ಯಾನಚಂದ್ ರವರ ಮಾರ್ಗದರ್ಶನದಲ್ಲಿ ಭಾರತೀಯ ಹಾಕಿ ತಂಡವು 1928, 1932 ಮತ್ತು 1936 ರಲ್ಲಿ ಸತತ 3 ಒಲಿಂಪಿಕ್ ಚಿನ್ನದ ಪದಕಗಳನ್ನು ಗಳಿಸಿತು ಮತ್ತು 1955 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಸಹ ಅವರಿಗೆ ನೀಡಲಾಯಿತು” ಎನ್ನುವ ಮಾಹಿತಿಯನ್ನು ನೀಡಿದರು.ನಂತರದಲ್ಲಿ ಶ್ರೀ ವಿಠ್ಠಲ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತ “ಶಿಸ್ತು,ಪರಿಶ್ರಮ, ಕ್ರೀಡಾ ಮನೋಭಾವನೆ ಮತ್ತು ತಂಡದ ಕೆಲಸ ಸೇರಿದಂತೆ ಕ್ರೀಡೆಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಗುರಿ ಮತ್ತು ದೇಶದ ಕ್ರೀಡಾ ನಾಯಕರಿಗೆ ಹೆಮ್ಮೆ ತರುವ ಮೇಜರ್ ಧ್ಯಾನ್ ಚಂದ್ ಜನ್ಮದ ಸವಿ ನೆನಪಿಗಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸುತ್ತೇವೆ ಎನ್ನುತ್ತಾ, ದೈಹಿಕ ಚಟುವಟಿಕೆಗಳ ಪ್ರಾಮುಖ್ಯತೆಯ ಬಗ್ಗೆ ಮತ್ತು ತಮ್ಮ ವೃತ್ತಿಜೀವನದ ಕೆಲವು ಅನುಭವಗಳನ್ನು ಹಂಚಿಕೊಂಡರು ಶ್ರೀ ದುರ್ಗಣ್ಣರವರು ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಹೇಳಿದರು.ನಂತರದಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ಹಗ್ಗಜಗ್ಗಾಟದಿಂದ ಕ್ರೀಡಾ ಕಾರ್ಯಕ್ರಮಗಳು ಪ್ರಾರಂಭವಾದವು.
Scroll to Top