Aksharabhyasa and Vidyarambha in RVK – Hagaribommanahalli

Hagaribommanahalli, May. 25: Aksharabhyasa and Vidyarambha
program was organized herein Rashtrotthana Vidya Kendra –
Hagaribommanahalli.The program began with a Ganahoma.Sri Niranjan Swamiji of Bijapur graced the program. Sri Ranganath, Principal of Rashtrotthana Vidya Kendra CBSE School,delivered the inaugural address. He gave an introduction to the activities
of Rashtrotthana.Sri Niranjan Swamiji prefaced the children’s further education by conducting Aksharabhyasa. Addressing the parents, the Swamiji said,
“Parents, children learn from what you do. May your behaviour be very good. Give good education and culture to the children who will be the light of a great future.” He blessed the parents by giving them good words.More than 39 guardians were present at this event.

ಹಗರಿಬೊಮ್ಮನಹಳ್ಳಿ, ಮೇ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ
ಅಕ್ಷರಾಭ್ಯಾಸ ಮತ್ತು ಪ್ರಥಮ ಪಾಠ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವು ಗಣಹೋಮದ ಮೂಲಕ ಪ್ರಾರಂಭವಾಯಿತು. ಈ ಕಾರ್ಯಕ್ರಮದಲ್ಲಿ ಬಿಜಾಪುರದ ಶ್ರೀ ನಿರಂಜನ ಸ್ವಾಮೀಜಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್ಇ ಶಾಲೆಯ ಪ್ರಧಾನಾಚಾರ್ಯರಾದ ಶ್ರೀ ರಂಗನಾಥ್ ಅವರು ದಿಕ್ಸೂಚಿ ಭಾಷಣ ಮಾಡಿದರು. ರಾಷ್ಟ್ರೋತ್ಥಾನದ ಕಾರ್ಯ ಚಟುವಟಿಕೆಗಳ ಪರಿಚಯವನ್ನು ತಿಳಿಸಿದರು. ಶ್ರೀ ನಿರಂಜನ ಸ್ವಾಮೀಜಿಗಳು ಮಕ್ಕಳಿಗೆ ಅಕ್ಷರಾಭ್ಯಾಸ ಸಂಸ್ಕಾರವನ್ನು ಮಾಡಿಸುವುದರ ಮೂಲಕ ಮಕ್ಕಳ ಮುಂದಿನ ವಿದ್ಯಾರ್ಜನೆಯ ಆರಂಭಕ್ಕೆ ಮುನ್ನುಡಿಯನ್ನು ಬರೆದರು. ಸ್ವಾಮಿಗಳು ಪಾಲಕರನ್ನು ಉದ್ದೇಶಿಸಿ ಮಾತನಾಡುತ್ತಾ ‘ನೀವು ಮಾಡುವುದನ್ನು ಮಕ್ಕಳು ಕಲಿಯುತ್ತಾರೆ ನಿಮ್ಮ ವರ್ತನೆಯು ತುಂಬಾ ಉತ್ತಮವಾಗಿರಲಿ. ಭವ್ಯ ಭವಿಷ್ಯದ ಬೆಳಕಾಗುವ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು, ಸಂಸ್ಕಾರವನ್ನು ನೀಡಿ’ ಎಂದು ಹಿತನುಡಿಗಳನ್ನು ತಿಳಿಸುವುದರ ಮೂಲಕ ಆಶೀರ್ವಚನ ಮಾತುಗಳನ್ನು
ನುಡಿದರು. ಈ ಕಾರ್ಯಕ್ರಮದಲ್ಲಿ ಸುಮಾರು 39ಕ್ಕಿಂತ ಹೆಚ್ಚಿನ ಪಾಲಕ ಪೋಷಕ ಬಂಧುಗಳು ಉಪಸ್ಥಿತರಿದ್ದರು.

Scroll to Top