




Hagaribommanahalli, Aug. 15: Bharat Mata Puja Program was organized herein Rashtrotthana Vidya Kendra – Hagaribommanahalli Student Hostel. Sri Basavanagowda, Secretary of Hagaribommanahalli Rashtrotthana Sansthe and Sri Rajashekar, Chief Spokesperson, Gram Vikas Pranayam Member, were present. Speaking at the program, Sri Rajashekar said, “Mother is affectionate. Our motherland is also a land of heroes. One must have done merit to be born in this country. Patriotic sentiment should be awakened in all of us.” He narrated the real events of the lives of Subhash Chandra Bose, Swami Vivekananda, and Shivaji.
All the children, elders, and teachers of the student hostel offered flowers to Bharat Mata.
ಹಗರಿಬೊಮ್ಮನಹಳ್ಳಿ, ಆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿ ವಿದ್ಯಾರ್ಥಿನಿಲಯದಲ್ಲಿ ಭಾರತ ಮಾತಾ ಪೂಜನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಸವನಗೌಡರು ಹಾಗೂ ಮುಖ್ಯ ವಕ್ತಾರರಾದ ಗ್ರಾಮ ವಿಕಾಸ ಪ್ರಾಂತ್ಯದ ಸದಸ್ಯರಾದ ಶ್ರೀ ರಾಜಶೇಖರರವರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ರಾಜಶೇಖರ ಅವರು ಮಾತನಾಡಿ “ತಾಯಿ ವಾತ್ಸಲ್ಯಮಯಿ. ನಮ್ಮ ಮಾತೃಭೂಮಿ ವೀರ ಭೂಮಿಯೂ ಹೌದು. ಈ ದೇಶದಲ್ಲಿ ಹುಟ್ಟಲು ಪುಣ್ಯ ಮಾಡಿರಬೇಕು. ರಾಷ್ಟ್ರಹಿತ ಮನೋಭಾವ ನಮ್ಮೆಲ್ಲರಲ್ಲೂ ಜಾಗೃತವಾಗಬೇಕು” ಎನ್ನುತ್ತಾ ಸುಭಾಷ್ ಚಂದ್ರ ಬೋಸ್ , ಸ್ವಾಮಿ ವಿವೇಕಾನಂದರು, ಶಿವಾಜಿಯ ಜೀವನದ ನೈಜ ಘಟನೆಗಳನ್ನು ವಿವರಿಸಿದರು.
ವಿದ್ಯಾರ್ಥಿ ನಿಲಯದ ಎಲ್ಲ ಮಕ್ಕಳು, ಹಿರಿಯರು , ಶಿಕ್ಷಕರು ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿದರು.