



Hagaribommanahalli, June 9: Hindu Samrajyotsava and Nayakatva Pratijnavidhi Swikara Program was organized herein Rashtrotthana Vidya Kendra – Hagaribommanahalli. Sri Mallesh Doddamani, DySP of Kudligi Sub-Division, graced the program. Sri Durganna, Co-Chairman of Hagaribommanahalli Rashtrotthana Sanstha, spoke as the chief spokesperson of the program and said, “Discipline, learning, and organized power should be there among the students. We should act knowing that we are all one family. Explaining the achievements of Shivaji Maharaj in his childhood, he said that Shivaji was the one who established an empire from scratch. He was a worthy leader who instilled self-confidence in the minds of the Hindu people and distributed work according to strength, ability, and skill and ensured that the administration was carried out systematically.” The chief guest spoke about the students and said, “Leadership is essential to carry out responsibility properly. The qualities of Shivaji for leadership inspire everyone.” The students were divided into four groups – Aravalli, Himalaya, Nilgiri and Sahyadri – and the best leaders were selected from among them. Along with them, school leaders and cultural leaders were selected, as well as leaders of the groups. All of them were administered the oath and performed the rituals. The school principal, Sri Sriranganath, administered the oath to the elected students. The students of the secondary section performed a disguised performance.
ಹಗರಿಬೊಮ್ಮನಹಳ್ಳಿ, ಜೂನ್ 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಹಿಂದೂ ಸಾಮ್ರಾಜ್ಯ ದಿವಸ್ ಹಾಗೂ ನಾಯಕತ್ವ ಸ್ವೀಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾದ ಕೂಡ್ಲಿಗಿ ಉಪ ವಿಭಾಗದ ಡಿವೈಎಸ್ಪಿ ಯಾದ ಶ್ರೀ ಮಲ್ಲೇಶ ದೊಡ್ಡಮನಿಯವರು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಸಂಸ್ಥೆಯ ಸಹಕಾರ್ಯದರ್ಶಿಗಳಾದ ಶ್ರೀ ದುರ್ಗಣ್ಣರವರು ಮಾತನಾಡಿ “ವಿದ್ಯಾರ್ಥಿಗಳಲ್ಲಿ ಅನುಶಾಸನ, ಕಲಿಕೆ, ಸಂಘಟಿತ ಶಕ್ತಿ ಇವೆಲ್ಲವೂ ನಿರಂತರವಾಗಿರಬೇಕು. ನಾವೆಲ್ಲರೂ ಒಂದೇ ಕುಟುಂಬ ಎಂದು ತಿಳಿದು ಕಾರ್ಯಪ್ರವೃತ್ತರಾಗಬೇಕು ಎಂಬುದಾಗಿ ನಾಯಕತ್ವದ ಕುರಿತು ತಿಳಿಸಿ, ಶಿವಾಜಿ ಮಹಾರಾಜರ ಬಾಲ್ಯದ ಜೀವನ ಸಾಧನೆಗಳನ್ನು ವಿವರಿಸುತ್ತಾ ಶಿವಾಜಿಯು ಶೂನ್ಯದಿಂದ ಸಾಮ್ರಾಜ್ಯ ಸ್ಥಾಪಿಸಿದವರು. ಹಿಂದೂ ಜನಮಾನಸದಲ್ಲಿ ಆತ್ಮಸ್ಥೈರ್ಯ ತುಂಬಲು ಹಾಗೂ ಶಕ್ತಿ ,ಸಾಮರ್ಥ್ಯ ವಿವೇಚನೆಗೆ ಅನುಗುಣವಾಗಿ, ಕೌಶಲ್ಯಕ್ಕನುಗುಣವಾಗಿ ಕೆಲಸವನ್ನು ಹಂಚಿ ವ್ಯವಸ್ಥಿತವಾಗಿ ಆಡಳಿತ ನಡೆಯುವಂತೆ ಮಾಡಿದ ಯೋಗ್ಯ ನೇತಾರರು” ಎಂದರು. ಮುಖ್ಯ ಅತಿಥಿಗಳು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ “ಜವಾಬ್ದಾರಿಯನ್ನು ಸರಿಯಾಗಿ ನಡೆಸಲು ನಾಯಕತ್ವ ಅವಶ್ಯ. ನಾಯಕತ್ವಕ್ಕೆ ಶಿವಾಜಿಯಲ್ಲಿರುವ ಗುಣಗಳು ಎಲ್ಲರಿಗೂ ಸ್ಪೂರ್ತಿ ನೀಡುತ್ತದೆ” ಎಂದು ತಿಳಿಸಿದರು. ವಿದ್ಯಾರ್ಥಿಗಳನ್ನು ಅರಾವಳಿ, ಹಿಮಾಲಯ ನೀಲಗಿರಿ ಹಾಗೂ ಸಹ್ಯಾದ್ರಿ ಎಂದು ನಾಲ್ಕು ವಾಹಿನಿಗಳಾಗಿ ವಿಭಾಗಿಸಿ ಅವರಲ್ಲಿ ಉತ್ತಮ ನಾಯಕರನ್ನು ಆಯ್ಕೆ ಮಾಡಲಾಗಿತ್ತು. ಇವರೊಂದಿಗೆ ಶಾಲಾ ನಾಯಕರು ಹಾಗೂ ಸಾಂಸ್ಕೃತಿಕ ನಾಯಕರು, ವಾಹಿನಿಯ ನಾಯಕರನ್ನು ಆಯ್ಕೆ ಮಾಡಲಾಯಿತು. ಅವರೆಲ್ಲರಿಗೂ ಪ್ರತಿಜ್ಞಾ ಸ್ವೀಕಾರ,ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಶಾಲೆಯ ಪ್ರಧಾನಾಚಾರ್ಯರಾದ ಶ್ರೀ ಶ್ರೀರಂಗನಾಥರವರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಮಾಧ್ಯಮಿಕ ವಿಭಾಗದ ವಿದ್ಯಾರ್ಥಿಗಳು ಛದ್ಮವೇಷ ಪ್ರದರ್ಶಿಸಿದರು.