Ratha Saptami celebration in RVK – Hagaribommanahalli

Home > News & Events>Ratha Saptami celebration in RVK – Hagaribommanahalli

Hagaribommanahalli, Feb. 4: Ratha Saptami was celebrated herein Rashtrotthana Vidya Kendra – Hagaribommanahalli. Sri Prabhulingaraj Badami, a famous businessman and yoga guru of Hagaribommanahalli, was present as the guest of the program. Addressing the students, he said, “We should remember the five elements and do Surya Namaskar. You students should never forget yoga, Indian culture, and Indian principles. You should grow in harmony with nature. Only then you can always be healthy. You are blessed because you all are getting the best education at Rashtroththana School.” Speaking about the importance of Aditya Hridaya Stotra, the uniqueness of Ratha Saptami and the steps of its celebration, Sri Girish Bhat, the school’s Sanskrit teacher, said, “We should worship the Sun, who is the lord of all the splendours of the world, the cause of all the seasons, and the witness of the deeds of all the living beings in the world. In the view of Indian knowledge, the Sun is not just a burning sphere, but he is the cause of the development of all living beings. The Sun sits on the seven horses and moves on its journey from the south to the north.” The students performed Surya Namaskar.

ಹಗರಿಬೊಮ್ಮನಹಳ್ಳಿ, ಫೆ. 04: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ರಥಸಪ್ತಮಿಯನ್ನು ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹಗರಿಬೊಮ್ಮನಹಳ್ಳಿಯ ಪ್ರಸಿದ್ಧ ಉದ್ಯಮಿಗಳಾದ ಹಾಗೂ ಯೋಗ ಗುರುಗಳಾದ ಶ್ರೀ ಪ್ರಭುಲಿಂಗರಾಜ್ ಬಾದಾಮಿಯವರು ಆಗಮಿಸಿದ್ದರು. ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ, “ನಾವು ಪಂಚಭೂತಗಳನ್ನು ನೆನಪಿಸಿಕೊಂಡು ಸೂರ್ಯ ನಮಸ್ಕಾರ ಮಾಡಬೇಕು. ವಿದ್ಯಾರ್ಥಿಗಳಾದ ನೀವು ಯೋಗವನ್ನು, ಭಾರತೀಯ ಸಂಸ್ಕೃತಿಯನ್ನು, ಭಾರತೀಯ ತತ್ವಗಳನ್ನು ಎಂದಿಗೂ ಮರೆಯಬಾರದು. ಪ್ರಕೃತಿಯೊಂದಿಗೆ ಬೆರೆತು ಬೆಳೆಯಬೇಕಿದೆ. ಆಗ ಸದಾ ಆರೋಗ್ಯವಾಗಿರಲು ಸಾಧ್ಯ. ರಾಷ್ಟ್ರೋತ್ಥಾನ ಶಾಲೆಯಲ್ಲಿ ಸರ್ವೋತ್ತಮ ಶಿಕ್ಷಣ ನಿಮಗೆಲ್ಲರಿಗೂ ದೊರೆಯುತ್ತಿದ್ದುದರಿಂದ ನೀವೇ ಪುಣ್ಯವಂತರು” ಎಂದು ಹೇಳಿದರು. ಶಾಲೆಯ ಸಂಸ್ಕೃತ ಶಿಕ್ಷಕರಾದ ಶ್ರೀ ಗಿರೀಶ್ ಭಟ್ಟ ಅವರು ಆದಿತ್ಯ ಹೃದಯ ಸ್ತೋತ್ರದ ಮಹತ್ವ, ರಥಸಪ್ತಮಿ ವೈಶಿಷ್ಟ್ಯತೆ ಹಾಗೂ ಆಚರಣೆಯ ಕ್ರಮಗಳನ್ನು ಕುರಿತು ಮಾತನಾಡುತ್ತಾ “ಜಗತ್ತಿನ ಎಲ್ಲಾ ತೇಜಸ್ಸುಗಳಿಗೆ ಅಧಿಪತಿಯು, ಎಲ್ಲಾ ಋತುಗಳಿಗೆ ಕಾರಣಕರ್ತನು, ಜಗತ್ತಿನ ಎಲ್ಲಾ ಜೀವಿಗಳ ಕರ್ಮಗಳಿಗೆ ಸಾಕ್ಷೀಭೂತನು ಆದ ಸೂರ್ಯನನ್ನು ನಾವು ಆರಾಧನೆ ಮಾಡಬೇಕು. ಭಾರತೀಯ ಜ್ಞಾನ ದೃಷ್ಟಿಯಲ್ಲಿ ಸೂರ್ಯ ಕೇವಲ ಉರಿಯುವ ಗೋಳ ಅಲ್ಲ, ಸಕಲ ಜೀವರಾಶಿಯ ವಿಕಾಸಕ್ಕೆ ಅವನು ಕಾರಣಕರ್ತ. ಸೂರ್ಯ ಸಪ್ತಾಶ್ವಗಳ ಮೇಲೆ ಕುಳಿತು ತನ್ನ ಪಯಣವನ್ನು ದಕ್ಷಿಣದಿಂದ ಉತ್ತರದ ಪಥಕ್ಕೆ ಚಲಿಸುತ್ತಾನೆ” ಎಂದು ಹೇಳಿದರು. ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಪ್ರದರ್ಶಿಸಿದರು.