Hagaribommanahalli, Jan. 13: Makara Sankranti Utsav was celebrated herein Rashtrotthana Vidya Kendra – Hagaribommanahalli.Sri Vinayak Bhat, head of the school’s Sanskrit department, said, “Sankranti is a festival celebrated mainly in South India. Sankranti festival celebrated during the removal of pyru is a symbol of prosperity. Sankranti is celebrated with religious principles.”Students K. Spandana and K. Charan Deep spoke and said, “Sun entering from one sign to another sign is called Sankranti. This Sankranti period is a blessed time.”Then the students presented a group song.
ಹಗರಿಬೊಮ್ಮನಹಳ್ಳಿ, ಜ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ಹಗರಿಬೊಮ್ಮನಹಳ್ಳಿಯಲ್ಲಿ ಮಕರ ಸಂಕ್ರಾಂತಿ ಉತ್ಸವವನ್ನು ಆಚರಿಸಲಾಯಿತು. ಶಾಲೆಯ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶ್ರೀ ವಿನಾಯಕ ಭಟ್ಟ ಅವರು ಮಾತನಾಡಿ “ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಆಚರಿಸಲಾಗುತ್ತದೆ” ಎಂದು ಹೇಳಿದರು. ವಿದ್ಯಾರ್ಥಿಗಳಾದ ಕು.ಸ್ಪಂದನ ಹಾಗೂ ಕು.ಚರಣ್ ದೀಪ್ ಮಾತನಾಡಿ “ಸೂರ್ಯನು ಒಂದು ರಾಶಿಯಿಂದ, ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಾಂತಿ ಎಂದು ಹೆಸರು. ಈ ಸಂಕ್ರಾಂತಿಯ ಕಾಲ, ಪುಣ್ಯ ಕಾಲವಾಗಿರುತ್ತದೆ” ಎಂದು ಹೇಳಿದರು. ನಂತರ ವಿದ್ಯಾರ್ಥಿಗಳು ಸಮೂಹ ಗೀತ ಗಾಯನ ಪ್ರಸ್ತುತಪಡಿಸಿದರು.
.