Hagaribommanahalli, Dec 13-14: ‘Rashtrotsava’ was celebrated herein Rashtrotthana Vidya Kendra – Hagaribommanahalli. The Chief Guest on the first day was the famous doctor of Vijayanagara district, Dr. Vijaya Venkatesh arrived and spoke and said, “If there is a mind, there is a way. There should be a mindset to serve rural areas. If you persevere, you will get results.” Sri Durganna, the Co-Secretary of the Hagaribommanahalli Rashtrotthana organization, as the chief speaker of the program, informed about the introduction and growth of the Rashtrotthana and said, “Our concept should not be personal but dedicated to the nation.” Later, cultural programs of the primary section were performed. Smt. Padma, the educational guide of Hagaribommanahalli Sharada Vidya Mandir, was the chief guest for the second day program of Rashthotsava. And Sri. Basavanagowda, Secretary of Hagaribommanahalli Rashtrotthana Sansthan were present. Sri Basavana Gowda said, “Rashthrotthana is working in a different dimension. It is working with the mission of building a healthy and sustainable society. The foundation of culture and tradition is very important for children. No matter how high a person goes, we should not leave our culture and tradition. Children should not become machines. Our children should be children who develop themselves.” Later cultural programs were performed.
ಹಗರಿಬೊಮ್ಮನಹಳ್ಳಿ, ಡಿಸೆಂಬರ್ 13-14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ‘ರಾಷ್ಟ್ರೋತ್ಸವ’ವನ್ನು ಆಚರಿಸಲಾಯಿತು. ಮೊದಲನೇ ದಿನ ಮುಖ್ಯ ಅತಿಥಿಗಳಾಗಿ ವಿಜಯನಗರ ಜಿಲ್ಲೆಯ ಪ್ರಖ್ಯಾತ ವೈದ್ಯರಾದ ಡಾ. ವಿಜಯ ವೆಂಕಟೇಶ್ ರವರು ಆಗಮಿಸಿ ಮಾತನಾಡುತ್ತಾ “ಮನಸ್ಸಿದ್ದಲ್ಲಿ ಮಾರ್ಗವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡುವಂತಹ ಮನಸ್ಥಿತಿ ಇರಬೇಕು. ಪರಿಶ್ರಮವಿದ್ದಲ್ಲಿ ಫಲ ಸಿಗುತ್ತದೆ” ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಸಂಸ್ಥೆಯ ಸಹ ಕಾರ್ಯದರ್ಶಿಗಳಾದ ಶ್ರೀ ದುರ್ಗಣ್ಣರವರು ರಾಷ್ಟ್ರೋತ್ಥಾನ ಪರಿಚಯ, ಬೆಳೆದು ಬಂದ ರೀತಿಯ ಬಗ್ಗೆ ತಿಳಿಸುತ್ತಾ “ನಮ್ಮ ಪರಿಕಲ್ಪನೆ ವೈಯಕ್ತಿಕವಾಗಿರದೇ ರಾಷ್ಟ್ರಕ್ಕೆ ಸಮರ್ಪಿತ ಎಂಬ ನಿಟ್ಟಿನಲ್ಲಿ ಮುನ್ನಡೆಯಬೇಕು” ಎಂದರು. ನಂತರದಲ್ಲಿ ಪ್ರಾಥಮಿಕ ವಿಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶಿತಗೊಂಡವು. ರಾಷ್ಟ್ರೋತ್ಸವ ಎರಡನೆಯ ದಿನದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಗರಿಬೊಮ್ಮನಹಳ್ಳಿ ಶಾರದಾ ವಿದ್ಯಾಮಂದಿರದ ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀಮತಿ ಪದ್ಮ ಅವರು ಆಗಮಿಸಿದ್ದರು. ಹಾಗೂ ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಸವನಗೌಡರು ಉಪಸ್ಥಿತರಿದ್ದರು. ಬಸವನಗೌಡರು ಮಾತನಾಡಿ “ರಾಷ್ಟ್ರೋತ್ಥಾನವು ಬೇರೆ ಬೇರೆ ಆಯಾಮದಲ್ಲಿ ಕೆಲಸ ಮಾಡುತ್ತಿದೆ. ಸ್ವಸ್ಥ ಸುಸ್ಥಿರ ಸಮಾಜ ನಿರ್ಮಾಣದ ಧ್ಯೇಯವನ್ನು ಇಟ್ಟು ಕಾರ್ಯವನ್ನು ನಿರ್ವಹಿಸುತ್ತಿದೆ. ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರದ ಅಡಿಪಾಯ ತುಂಬಾ ಮುಖ್ಯ; ಮನುಷ್ಯ ಎಷ್ಟೇ ಎತ್ತರಕ್ಕೆ ಹೋದರೂ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಬಿಡಬಾರದು. ಮಕ್ಕಳು ಯಂತ್ರಗಳಾಗಬಾರದು. ನಮ್ಮ ಮಕ್ಕಳು ನಮ್ಮತನವನ್ನು ಬೆಳೆಸುವ ಮಕ್ಕಳಾಗಬೇಕು” ಎಂದರು. ನಂತರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.