Hagaribommanahalli, Dec. 12: Geetha Jayanti was celebrated herein Rashtrotthana Vidya Kendra – Hagaribommanahalli. On the occasion of Gita Saptaha, the children recited the 9th chapter and 12th chapter of Bhagavad Gita daily. Explaining the importance of Gita Jayanti, Sri Suveera, the Vice Principal of the Vidyalaya said that the study of Bhagavad Gita is very useful for the achievement of our life in this modern era. Studying Bhagavad Gita also gives us the path of life. They said that the Lord himself had preached the Bhagavad Gita to Arjuna for the benefit of the world. And he occasionally mentioned the specialty of each of the eighteen chapters. The program concluded with Mangalarathi for Geetacharya.
ಹಗರಿಬೊಮ್ಮನಹಳ್ಳಿ, ಡಿ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಗೀತಾ ಜಯಂತಿಯನ್ನು ಆಚರಿಸಲಾಯಿತು. ಗೀತಾ ಸಪ್ತಾಹದ ನಿಮಿತ್ತ ಮಕ್ಕಳಿಂದ ಪ್ರತಿನಿತ್ಯ ಭಗವದ್ಗೀತೆಯ 9ನೇ ಅಧ್ಯಾಯ ಹಾಗೂ 12ನೇ ಅಧ್ಯಾಯದ ಪಠಣವನ್ನು ಮಾಡಲಾಯಿತು. ಗೀತಾ ಜಯಂತಿಯ ಮಹತ್ವವನ್ನು ತಿಳಿಸುತ್ತ ವಿದ್ಯಾಲಯದ ಉಪಪ್ರಧಾನ ಆಚಾರ್ಯರಾದ ಶ್ರೀಸುವೀರರವರು ಮಕ್ಕಳನ್ನು ಕುರಿತು, ಆಧುನಿಕ ಕಾಲಘಟ್ಟದ ಈ ಸಂದರ್ಭದಲ್ಲಿ ಭಗವದ್ಗೀತೆಯ ಅಧ್ಯಯನ ನಮ್ಮ ಜೀವನದ ಸಾಧನೆಗೆ ಅತ್ಯಂತ ಉಪಯುಕ್ತದ್ದಾಗಿದೆ. ಭಗವದ್ಗೀತೆಯ ಅಧ್ಯಯನದಿಂದ ನಮಗೆ ಜೀವನ ಮಾರ್ಗವೂ ಲಭಿಸುತ್ತದೆ. ಸಾಕ್ಷಾತ್ ಭಗವಂತನೇ ಭಗವದ್ಗೀತೆಯ ಉಪದೇಶವನ್ನು ಲೋಕದ ಹಿತಕ್ಕಾಗಿ ಅರ್ಜುನನಿಗೆ ಮಾಡಿದ್ದಾನೆ ಎಂದರು. ಮತ್ತು ಹದಿನೆಂಟು ಅಧ್ಯಾಯಗಳಲ್ಲಿರುವ ಪ್ರತಿ ಅಧ್ಯಾಯದ ವಿಶೇಷತೆಯನ್ನು ಸಾಂದರ್ಭಿಕವಾಗಿ ತಿಳಿಸಿಕೊಟ್ಟರು. ಗೀತಾಚಾರ್ಯನಿಗೆ ಮಂಗಳಾರತಿಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.