Home > News & Events>‘National Unity Day’ Celebration in RVK – Hagaribommanahalli

Hagaribommanahalli, Oct. 30: ‘National Unity Day’ was celebrated on the occasion of the birth anniversary of Sardar Vallabhbhai Patel herein Rashtrotthana Vidya Kendra – Hagaribommanahalli. The program started with a patriotic song. Ku. Nayana narrating the biography of Vallabhbhai Patel, she said, “Patel dedicated his life to unity and integrity”.
Co-ordinator, Sri Nagaraj K. spoke and said, “Sardar Vallabhbhai Patel, ‘The Man of Steel of India’s Freedom Struggle’, gave his full force to strengthen India after independence. As a result, a new nation was born.”

ಹಗರಿಬೊಮ್ಮನಹಳ್ಳಿ, ಅ. 30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ‘ರಾಷ್ಟ್ರೀಯ ಏಕತಾ ದಿವಸ’ವನ್ನು ಆಚರಿಸಲಾಯಿತು.
ದೇಶಭಕ್ತಿ ಗೀತೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ವಿದ್ಯಾರ್ಥಿನಿ ಕು. ನಯನ ವಲ್ಲಭಭಾಯಿ ಪಟೇಲ ಅವರ ಜೀವನಚರಿತ್ರೆಯನ್ನು ತಿಳಿಸುತ್ತ, “ಅವರು ಏಕತೆ ಮತ್ತು ಸಮಗ್ರತೆಗೆ ತಮ್ಮ ಜೀವನವನ್ನು ಸಮರ್ಪಿಸಿದರು” ಎಂದು ಹೇಳಿದಳು.ಕೋ-ಆರ್ಡಿನೇಟರ್, ಶ್ರೀ ನಾಗರಾಜ್ ಕೆ. ಅವರು ಮಾತನಾಡಿ, “ಭಾರತದ ಸ್ವಾತಂತ್ರ್ಯ ಹೋರಾಟದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಸ್ವಾತಂತ್ರ್ಯದ ನಂತರ ಭಾರತದ ಬಲವರ್ಧನೆಗೆ ಪೂರ್ಣ ಪ್ರಮಾಣದಲ್ಲಿ ತಮ್ಮ ಉಕ್ಕಿನ ಶಕ್ತಿಯನ್ನು ನೀಡಿದರು. ಹೊಸ ರಾಷ್ಟ್ರ ಹುಟ್ಟಿತು” ಎಂದು ಹೇಳಿದರು.ಶಾಲೆಯ ಉಪ ಪ್ರಧಾನಾಚಾರ್ಯರಾದ ಶ್ರೀ ಸುವೀರಾರವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

Scroll to Top