Hagaribommanahalli, Oct 17: ‘Maharshi Valmiki Jayanti’ was celebrated herein Rashtrotthana Vidya Kendra – Hagaribommanahalli. Sri Sriranganath, the principal of the school, said, “Tapashakti is necessary for a common man to become a Maharishi.” Sri Vinayaka Bhat said “We celebrate Ashvijamasa Shukla Paksha Pournima Day as Valmiki Jayanti. Critics say that Maharishi Valmiki lived 5000 years BC. Maharshi Valmiki composed the epic Ramayana which consists of 28,000 verses. Ramayana contains wonderful spiritual worldly elements. We should know this in our life and must adopt this” he said.
ಹಗರಿಬೊಮ್ಮನಹಳ್ಳಿ, ಅಕ್ಟೋಬರ್ 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ‘ಮಹರ್ಷಿ ವಾಲ್ಮೀಕಿ ಜಯಂತಿ’ಯನ್ನು ಆಚರಿಸಲಾಯಿತು. ಶಾಲೆಯ ಪ್ರಧಾನಾಚಾರ್ಯರಾದ ಶ್ರೀರಂಗನಾಥರವರು ಮಾತನಾಡುತ್ತ “ಸಾಮಾನ್ಯ ಮನುಷ್ಯ ಮಹರ್ಷಿಯಾಗಲು ತಪ:ಶಕ್ತಿ ಅವಶ್ಯ” ಎಂದರು. ಶ್ರೀ ವಿನಾಯಕ ಭಟ್ಟರು ಮಾತನಾಡಿ “ಅಶ್ವಿಜಮಾಸದ ಶುಕ್ಲ ಪಕ್ಷದ ಪೌರ್ಣಿಮಾ ದಿವಸವನ್ನು ವಾಲ್ಮೀಕಿ ಜಯಂತಿ ಎಂದು ಆಚರಿಸುತ್ತೇವೆ. ಮಹರ್ಷಿ ವಾಲ್ಮೀಕಿ ಅವರು ಕ್ರಿಸ್ತಪೂರ್ವ ಐದು ಸಾವಿರ ವರ್ಷಗಳ ಹಿಂದೆ ಇದ್ದರು ಎಂದು ವಿಮರ್ಶಕರು ಹೇಳುತ್ತಾರೆ. ಮಹರ್ಷಿ ವಾಲ್ಮೀಕಿ 28,000 ಶ್ಲೋಕಗಳನ್ನು ಒಳಗೊಂಡಿರುವ ಆದಿಕಾವ್ಯವಾದ ರಾಮಾಯಣವನ್ನು ರಚನೆ ಮಾಡಿದ್ದಾರೆ. ರಾಮಾಯಣ ಅತ್ಯದ್ಭುತ ಆಧ್ಯಾತ್ಮಿಕ ಪ್ರಾಪಂಚಿಕ ಅಂಶಗಳನ್ನು ಒಳಗೊಂಡಿದೆ. ಇದನ್ನು ನಾವೆಲ್ಲರೂ ತಿಳಿದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ” ಎಂದು ಹೇಳಿದರು.