




Hagaribommanahalli, June 21: The 11th International Yoga Day was celebrated herein Rashtrotthana Vidya Kendra – Hagaribommanahalli. Advocate Sri Prahlad Kagi participated as the chief spokesperson of the program and said that through the practice of yoga, one can increase memory power and get a cultured education. Scholars from all over the country and abroad are coming to India to study yoga. But we Indians are addicted to Western culture as if it is not a backyard plant. Today, more than 165 countries of the world are adopting and practicing yoga. Let us also get success from yoga, he said, addressing the students. Speaking at the event, Sri Basavanagouda, Secretary, Rashtrotthana Vidya Kendra – Hagaribommanahalli, advised that if the body and mind are controlled, it is possible to concentrate on the practice, so they should lead a healthy life through specific asanas, pranayama, meditation and stress reduction techniques. Yoga demonstrations were given by yoga experts. Yoga teacher Sri Praveen conducted mass Suryanamaskarasana for all the students.
ಹಗರಿಬೊಮ್ಮನಹಳ್ಳಿ, ಜೂ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ 11ನೇ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ವಕೀಲರಾದ ಶ್ರೀ ಪ್ರಹ್ಲಾದ್ ಕಾಗಿಯವರು ಭಾಗವಹಿಸಿ, ಯೋಗ ಅಭ್ಯಾಸದಿಂದ ಸ್ಮರಣ ಶಕ್ತಿ ಹೆಚ್ಚಿಸಿಕೊಂಡು ಸಂಸ್ಕಾರಯುತ ಶಿಕ್ಷಣ ಪಡೆಯಬಹುದು. ಯೋಗವನ್ನು ಅಧ್ಯಯನ ಮಾಡಲು ದೇಶ ವಿದೇಶಗಳಿಂದ ವಿದ್ವಾಂಸರು ಭಾರತಕ್ಕೆ ಬರುತ್ತಿದ್ದಾರೆ. ಆದರೆ ಭಾರತೀಯರಾದ ನಾವುಗಳು ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗಿದ್ದೇವೆ. ಇಂದು ಪ್ರಪಂಚದ 165ಕ್ಕೂ ಹೆಚ್ಚು ದೇಶಗಳು ಯೋಗವನ್ನು ಅಳವಡಿಸಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ನಾವು ಕೂಡ ಯೋಗದಿಂದ ಸಿದ್ಧಿ ಪಡೆಯೋಣ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿಗಳಾದ ಶ್ರೀಬಸವನಗೌಡ ಅವರು ಮಾತನಾಡಿ ಶರೀರ ಮತ್ತು ಮನಸ್ಸನ್ನು ನಿಗ್ರಹಿಸಿದರೆ ಅಭ್ಯಾಸದಲ್ಲಿ ಏಕಾಗ್ರತೆ ಹೊಂದಲು ಸಾಧ್ಯ ಆದ್ದರಿಂದ ನಿರ್ದಿಷ್ಟ ಆಸನಗಳು, ಪ್ರಾಣಾಯಾಮ, ಧ್ಯಾನ ಮತ್ತು ಒತ್ತಡ ಕಡಿತ, ತಂತ್ರಗಳ ಮೂಲಕ ಆರೋಗ್ಯಯುತ ಜೀವನ ರೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಯೋಗದ ವಿಶೇಷ ಪಟುಗಳಿಂದ ಯೋಗ ಪ್ರದರ್ಶನ ನೀಡಲಾಯಿತು. ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಕರಾದ ಪ್ರವೀಣ್ ರವರು ಸಾಮೂಹಿಕ ಸೂರ್ಯನಮಸ್ಕಾರಾಸನಗಳನ್ನು ಮಾಡಿಸಿದರು.